ಮಂಗಳೂರು: ನೂತನ‌ ಸಂಸದರಿಗೆ ಅದ್ಧೂರಿಯ ಸ್ವಾಗತ




ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಪ್ರಮಾಣ ವಚನ ಗೈದು ಜಿಲ್ಲೆಗೆ ಆಗಮಿಸಿದ ಬ್ರಿಜೇಶ್ ಚೌಟ ಅವರನ್ನು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳಿಕ ಬೆಂಬಲಿಗರು, ಹಿತೈಷಿಗಳು ಬೃಹತ್ ಮೆರವಣಿಗೆ ಮೂಲಕ ನಗರದ ಟಿಎಂಎ ಪೈ ಸಭಾಂಗಣಕ್ಕೆ ಕರೆ ತಂದರು.

ಮೆರವಣಿಗೆ ಉದ್ದಕ್ಕೂ, ಕಾವೂರು, ಬೋಂದೇಲ್, ಪದವಿನಂಗಡಿ, ಮೇರಿಹಿಲ್, ಯೆಯ್ಯಾಡಿ ಕದ್ರಿ, ಲಾಲ್‌ಬಾಗ್ ಮೊದಲಾದೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಮಾಲೆ, ಹೂಗುಚ್ಛ ನೀಡಿ ಸ್ವಾಗತಿಸಿದರು.

ಬಳಿಕ ಟಿಎಂಎ ಪೈ ಸಭಾಂಗಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಿತು.