ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಸ್ಥಳ ಮಹಜರಿಗೆ ಬಂದ ವೇಳೆ ಮೇಕಪ್‌ಗೆ ಅನುಮತಿ ನೀಡಲಾದ ಆರೋಪದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಜೂ.15ರಂದು ಪವಿತ್ರಾ ಗೌಡ ಅವರನ್ನು ಸ್ಥಳ ಮಹಜರು ನಡೆಸಲು ಪೊಲೀಸ್ ಅಧಿಕಾರಿಗಳು ರಾಜರಾಜೇಶ್ವರಿನಗರದ ಆಕೆಯ ಮನೆಗೆ ಕರೆದೊಯ್ದಿದ್ದು, ಮಹಜರು ನಡೆಸಿ ಹಿಂದಿರುಗುವ ವೇಳೆ ಲಿಪ್ ಸ್ಟಿಕ್ ಹಾಗೂ ಮೇಕಪ್ ಮಾಡಿಕೊಂಡು ನಗುತ್ತಾ ಹೊರಬಂದಿದ್ದರು. ಇದೆಲ್ಲಾ ಮಾಧ್ಯಮಗಳ ವೀಡಿಯೊದಲ್ಲಿ ಸೆರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಪವಿತ್ರಾಗೌಡಗೆ ಮೇಕಪ್ ಮಾಡಿಕೊಳ್ಳಲು ಅನುಮತಿ ನೀಡಿದ್ದರ ಕುರಿತು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯಿಂದ ಸಬ್‌ಇನ್‌ಸ್ಪೆಕ್ಟರ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆಯೆಂದು ತಿಳಿದು ಬಂದಿದೆ.

Social Icons