ಉಚಿತ ಕೊಡೆ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ

 


 ಕಿನ್ನಿಗೋಳಿ: ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ ನೀಡುವ ಜೆ.ಬಿ ಫ್ರೆಂಡ್ಸ್ ನ ಕಾರ್ಯವೈಖರಿ ಅಭಿನಂದನೀಯ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹಿಲ್ಡಾ ಡಿಸೋಜ್ ಅವರು ಹೇಳಿದರು. 

ಜೆ ಬಿ ಪ್ರೆಂಡ್ಸ್  ಕಿನ್ನಿಗೋಳಿ ಮತ್ತು ದಾನಿಗಳ  ಸಹಕಾರದಿಂದ  ಶ್ರೀ ಆದಿಶಕ್ತಿ ನಾಗಕನ್ನಿಕಾ ಕ್ಷೇತ್ರ ಬಾಬಕೋಡಿಯಲ್ಲಿ  ಸ್ಥಳೀಯ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಈ ಸಂದರ್ಭ ಸೇಸಪ್ಪ  ಮಡಿವಾಳ, ಪೃಥ್ವಿರಾಜ ಆಚಾರ್ಯ, ಕೆ ಭುವನಾಭಿರಾಮ ಉಡುಪ, ಸರ್ಕಾರಿ ಪ್ರಾಥಮಿಕ ಶಾಲೆ ಪದ್ಮನೂರು ಇಲ್ಲಿನ   ಮುಖ್ಯೋಪಾಧ್ಯಾಯಿನಿ   ಐರಿನ್ ಫೆರ್ನಾಂಡಿಸ್  , ರಾಜಲಕ್ಷ್ಮಿ , ವಿನ್ಸೆಂಟ್  ಡಿಕೋಸ್ತಾ, ಸಂತೋಷ್ ಶೆಟ್ಟಿ,  ಮತ್ತು ನಿಶಾನ್ ಕ್ವಾಡ್ರಸ್  ಮತ್ತಿತರರು ಉಪಸ್ಥಿತರಿದ್ದರು