ಕರೋಪಾಡಿ ಗ್ರಾಪಂನಲ್ಲಿ ಗ್ರಾಮೀಣ ಪುನರ್ವಸತಿ ಕಾರ್‍ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ Karopady

 



ವರದಿ: ಹರೀಶ್ ಮಾಂಬಾಡಿ

ಬಂಟ್ವಾಳ:ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಕರೋಪಾಡಿ ಗ್ರಾಮ ಪಂಚಾಯತ್‌ನಲ್ಲಿ ತೆರವಾಗಿರುವ ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್‍ಯಕರ್ತರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಹ ವಿಕಲಚೇತನ ಅಭ್ಯರ್ಥಿಗಳು ಇದ್ದಲ್ಲಿ ಅರ್ಜಿಯನ್ನು ,ಶಿಶು ಅಭಿವೃದ್ಧಿ ಯೋಜನಾ ಕಚೇರಿ ವಿಟ್ಲ ರಿಹಾ ಪ್ಲಾನೆಟ್ ಚಂದ್ರನಾಥ ಬಸದಿ ಎದುರು ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.

 

 ಜುಲೈ 20 ಒಳಗೆ ಅರ್ಜಿ ಸಲ್ಲಿಸುವಂತೆವಿಟ್ಲದ  ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.. ಷರತ್ತುಗಳು

 ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು.

ಅಂಗವಿಕಲತೆಯ ಪ್ರಮಾಣ ಶೇ.೪೦ರಷ್ಟಿರಬೇಕು. ಮಿತಿ-18 ವರ್ಷದಿಂದ 45 ವರ್ಷದ ಆರೋಗ್ಯವಂತರು.

ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಇಲ್ಲವಾದಲ್ಲಿ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ವಿಕಲಚೇತನರಾಗಿರಬೇಕು - ಭಾಗಶಃ ಅಂಧರಿಗೆ, ಭಾಗಶಃ ಶ್ರವಣದೋಷವುಳ್ಳವರಿಗೆ (ಮೈಲ್ಡ್ ಮತ್ತು ಮಾಡರೇಟ್) ಮತ್ತು ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸುವುದು.

ವಿಕಲಚೇತನ ಅಭ್ಯರ್ಥಿಯ ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸುವುದು.

ಲಗತ್ತಿಸಬೇಕಾದ ದಾಖಲೆಗಳು:

ನಿಗದಿತ ನಮೂನೆಯ ಅರ್ಜಿ

ವಿಕಲಚೇತನ ಅಭ್ಯರ್ಥಿಯ ಭಾವಚಿತ್ರ

ವಿಕಲಚೇತನರ ಗುರುತಿನ ಕಾರ್ಡಿನ ಜೆರಾಕ್ಸ್ ಪ್ರತಿ

ಕಾರ್ಡ್‌ನ ಪ್ರತಿ

ಎಸ್.ಎಸ್.ಎಲ್.ಸಿ ಅಂಕಪಟ್ಟಿ ಜೆರಾಕ್ಸ್ ಪ್ರತಿ

ರೇಶನ್ ಕಾರ್ಡಿನ ಜೆರಾಕ್ಸ್ ಪ್ರತಿ

ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿ

ವಾಸ್ತವ್ಯದ ಬಗ್ಗೆ ಪಂಚಾಯತ್‌ನಿಂದ ದೃಢೀಕರಣ ಪತ್ರ  ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.