ಮೂಲ್ಕಿ ಕಾರ್ನಾಡ್ ಸರಕಾರಿ ಪಿ ಯು ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನ ಆಚರಣೆ

 


 

ಮಂಗಳೂರು: ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಮುಲ್ಕಿಯ ಕಾರ್ನಾಡ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಸಭೆಯಲ್ಲಿ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಸುಂದರ್ ರಾಜ್ ಮಾತನಾಡಿ ಮಾದಕ ವ್ಯಸನವು ಯುವಕರ ಅತ್ಯಂತ ಪರಿಣಾಮಾಕಾರಿಯಾದ ಪ್ರಭಾವವನ್ನು ಬೀರುತ್ತದೆ, ಇಂತಹ ಚಟುವಟಿಕೆಗಳಿಂದ ಅದಷ್ಟು ದೂರವಿರುವುದು ಒಳಿತು ಎಂದರು.

ಎಸ್ ಸುರೇಶ್ ರವರು ಟ್ರಾಫಿಕ್ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳಿ , ಹಿರಿಯ ಉಪನ್ಯಾಸಕಿ ಡಾ. ರೇಖಾ ಬಿ ಎಸ್. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ  ಜಯಲಕ್ಷ್ಮಿ ಟಿ ನಾಯಕ್, ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿ ರಮಾನಂದ್ ಉಪಸ್ಥಿತರಿದ್ದರು.