ವರದಿ: ಪ್ರಕಾಶ್ ಕೋಡಿಂಬಾಳ
ಕಡಬ:
ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಡಬದ ಹಿಂದೂ ಪರ ಸಂಘಟನೆಗಳ ಸಕ್ರಿಯ
ಕಾರ್ಯಕರ್ತ, ಸಾಮಾಜಿಕ ಕಾರ್ಯಕರ್ತ ಮೋದಿಯವರ ಅಪ್ಪಟ ಅಭಿಮಾನಿಯೊಬ್ಬರು ಉರುಳು ಸೇವೆ ಮಾಡಿ ತನ್ನ ಸಂಕಲ್ಪವನ್ನು ಈಡೇರಿಸಿದ್ದಾರೆ.
ಕಡಬ
ಸಮೀಪದ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ರಘುರಾಮ ನ್ಯಾಕ್ ಎಂಬ ಮೋದಿ ಅಭಿಮಾನಿ ಕಡಬ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ತನಕ ಭಾರೀ ಮಳೆಯ ನಡುವೆಯೂ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯಲ್ಲಿ ಉರುಳು ಸೇವೆ ಮಾಡಿದರು.
ಬಿಜೆಪಿ
ಕಾರ್ಯಕರ್ತರು, ಮು ಖಂಡರು ಶಂಖ,
ಜಾಗಟೆ, ಶಬ್ದದೊಂದಿಗೆ ನರೇಂದ್ರ ಮೋದಿಗೆ ಹಾಗೂ ಬಿಜೆಪಿ ನಾಯಕರಿಗೆ ಜೈಕಾರ ಕೂಗುತ್ತಾ ರಘುರಾಮ ನ್ಯಾಕ್ ಅವರ ಉರುಳು ಸೇವೆಗೆ ಪ್ರೋತ್ಸಾಹ ನೀಡಿದರು.
ಉರುಳು
ಸೇವೆ ಮುಗಿದ ಬಳಿಕ ಮೋದಿಯವರು ಐದು ವರ್ಷಗಳ ಕಾಲ ಸದೃಢ ಹಾಗೂ ಸುಭದ್ರ ಸರಕಾರ ನಡೆಸಿ ದೇಶ ಹಾಗೂ ಹಿಂದುತ್ವವನ್ನು ಉಳಿಸುವ ಕಾರ್ಯ ಮಾಡಲಿ ಎಂದು ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
Social Icons