ಐಸಿಯುವಿನಲ್ಲಿಯೇ ವಿವಾಹವಾಯ್ತು ಈ ಜೋಡಿ: ಕಾರಣ ಕೇಳಿದ್ರೆ ನೀವು ಹಾರೈಸ್ತೀರಾ...! ICU Marraige



ಲಕ್ನೋ: ದಾಖಲೆ ನಿರ್ಮಾಣಕ್ಕಾಗಿ ಹೇಗೆಹೇಗೋ ಯುವ ಜೋಡಿಗಳು ಮದುವೆಯಾಗೋದನ್ನು ನಾವು ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲೊಂದು ಯುವಜೋಡಿ ಆಸ್ಪತ್ರೆಯ ಐಸಿಯುನಲ್ಲೇ ಮದುವೆಯಾಗಿ ಸುದ್ದಿಯಾಗಿದೆ‌.

ಉತ್ತರ ಪ್ರದೇಶದ ಲಕ್ನೋ ನಗರದ ಆಸ್ಪತ್ರೆಯೊಂದರ ಐಸಿಯುನಲ್ಲಿ ಈ ಮದುವೆ ನಡೆದಿದ್ದು, ಅದರ ವೀಡಿಯೋ ಈಗ ವೈರಲ್ ಆಗಿದೆ. ಲಕ್ನೋ ಚೌಕ್ ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರು ತಮ್ಮ ಪುತ್ರಿಯ ಮದುವೆಯ ದಿನ ಸಮೀಪಿಸುತ್ತಿದ್ದಂತೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆಗೆ ಪುತ್ರಿಯ ಮದುವೆ ತನ್ನ ಮುಂದೆಯೇ ನಡೆಯಬೇಕೆನ್ನುವ ಮಹದಾಸೆಯಿತ್ತು. ಆದರೆ ಅವರು ಐಸಿಯುವಿನಿಂದ ಹೊರಗೆ ಬರದಂತಾಗಿದ್ದರು. ಆದ್ದರಿಂದ ಎರಡೂ ಕುಟುಂಬದ ಹಿರಿಯರು ಒಂದು ನಿರ್ಧಾರಕ್ಕೆ ಬಂದಿದ್ದು ವೈದ್ಯರು ಅವಕಾಶ ಕೊಟ್ಟರೆ ಐಸಿಯು ಒಳಗಡೆಯೇ ನಿಖಾಹ್ ಮಾಡಲು ನಿರ್ಣಯಿಸಿದ್ದಾರೆ.

ವೈದ್ಯಕೀಯ ಕಾಲೇಜಿನ ವೈದ್ಯರ ಸಹಕಾರದೊಂದಿಗೆ ಇಕ್ಬಾಲ್ ಅವರ ಆಸೆ ನೆರವೇರಿದೆ. ಎರಡೂ ಕುಟುಂಬದ ಪ್ರಮುಖರು ಐಸಿಯುನಲ್ಲಿ ಮಾಸ್ಕ್ ಧರಿಸಿಕೊಂಡು ಮೌಲಾನಾ ಅವರನ್ನು ಕರೆಸಿ ನಿಖಾಹ್ ನಡೆಸಿಕೊಟ್ಟಿದ್ದಾರೆ. ಬೆಡ್ ನಲ್ಲಿ ಅನಾರೋಗ್ಯದಿಂದ ಮಲಗಿದ್ದ ಇಕ್ಬಾಲ್ ಪುತ್ರಿಯರ ಮದುವೆ ನೋಡಿ ಖುಷಿಪಟ್ಟಿದ್ದಾರೆ. ಇದರ ವೀಡಿಯೋ ಈಗ ವೈರಲ್ ಆಗಿದೆ.