HSRP Number Plate ಅಳವಡಿಕೆಗೆ ಡೆಡ್‍ಲೈನ್ ಮುಕ್ತಾಯ| ಮುಂದೇನು?

ಬೆಂಗಳೂರು: 2019ಕ್ಕಿಂತ ಮೊದಲ ಖರೀದಿ ಮಾಡಿದ ವಾಹನಗಳಿಗೆ ಸಾರಿಗೆ ಇಲಾಖೆ HSRP ನಂಬರ್ ಪ್ಲೇಟ್ ಕಡ್ಡಾಯ ರೂಲ್ಸ್ ಜಾರಿ ಮಾಡಿರುವುದು ಹಳೆಯ ವಿಚಾರ. 2019ಕ್ಕಿಂತ ಮೊದಲು ನೋಂದಣಿ ಮಾಡಿಕೊಂಡ ದ್ವಿಚಕ್ರ ತ್ರಿಚಕ್ರ, ಲಘು, ಮಧ್ಯಮ, ಭಾರಿ ಕಾರು ಸೇರಿ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿತ್ತು. ಹಲವು ವಿಸ್ತರಣೆಗಳ ಮೂಲಕ ಜೂ.12ಕ್ಕೆ ಡೆಡ್‍ಲೈನ್ ಫಿಕ್ಸ್ ಮಾಡಲಾಗಿತ್ತು. ಇದೀಗ HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ್ದ ಗಡುವು ಜೂ.12ಕ್ಕೆ ಮುಕ್ತಾಯಗೊಂಡಿದೆ. 

2019ಕ್ಕಿಂತ ಮುಂಚೆ ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್  ಅಳವಡಿಸಲು ಈ ಮೊದಲು ನವೆಂಬರ್ 17ಕ್ಕೆ ಗಡುವು ನೀಡಿತ್ತು. ಆದ್ರೆ ವಾಹನ ಸವಾರರು ನಿರಾಸಕ್ತಿ ತೋರಿದ ಕಾರಣ ಫೆಬ್ರವರಿ 17ವರೆಗೆ ವಿಸ್ತರಣೆ ಮಾಡಲಾಗಿತ್ತು. ಬಳಿಕ ಜೂ.12ರವರೆಗೂ ಅವಧಿ ಎಕ್ಸ್‍ಟೆಂಡ್ ಆಗಿತ್ತು. ಆದ್ರೂ ಇಲ್ಲಿಯವರೆಗೆ ರಾಜ್ಯದಲ್ಲಿ ಇಲ್ಲಿಯವರೆಗೆ 35 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಇನ್ನೂ 1.54 ಕೋಟಿ ವಾಹನಗಳಿಗೆ ಆಳವಡಿಸಬೇಕಿದೆ. ಈಗಾಗಲೇ ಸಾರಿಗೆ ಇಲಾಖೆ ಮೂರು ಬಾರಿ ಡೆಡ್ಲೈನ್ ವಿಸ್ತರಣೆ ಮಾಡಿದೆ. ಆದರೂ ನಂಬರ್ ಪ್ಲೇಟ್ ಆಳವಡಿಕೆಗೆ ವಾಹನ ಸವಾರರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ವಾಹನ ಸವಾರರ ಬೇಜವಾಬ್ದಾರಿಗೆ ಸಾರಿಗೆ ಇಲಾಖೆ ದಂಡಾಸ್ತ್ರದ ಚಾಟಿ ಬೀಸಲು ಮುಂದಾಗಿದೆ. 

ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆ ಅವಧಿ ಮತ್ತೆ ವಿಸ್ತರಣೆಯಿಲ್ಲ, ಡೆಡ್ಲೈನ್ ನೀಡಿದ್ರೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸದ ವಾಹನ ಸವಾರರ ಮೇಲೆ RTO ಸಮರ ಸಾರಲು ಮುಂದಾಗಿದೆ. ಜೂನ್ 13 ರಿಂದ ನಂಬರ್ ಪ್ಲೇಟ್ ಆಳವಡಿಸಿಕೊಳ್ಳದ ವಾಹನ ಸವಾರರಿಗೆ  ಭಾರೀ ಶಾಕ್ ಕಾದಿದೆ. HSRP ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಮೊದಲ ಬಾರಿಗೆ 500 ದಂಡ, ಎರಡನೇ ಬಾರಿ ಸಿಕ್ಕಿ ಬಿದ್ದರೆ 1000 ದಂಡಕ್ಕೆ ತೀರ್ಮಾನ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. 

HSRP ನಂಬರ್ ಪ್ಲೇಟ್ ಪಡೆಯೋದು ಹೇಗೆ 

ಅನೇಕ ಮಂದಿ ನಿರ್ಲಕ್ಷ್ಯದಿಂದ HSRP ನಂಬರ್ ಪ್ಲೇಟ್ ಪಡೆಯದೇ ಇದ್ದರೆ, ಇನ್ನೂ ಕೆಲವು ಮಂದಿ ಕೊನೆಯ ಕ್ಷಣದ ಒತ್ತಡದಲ್ಲಿ  ಪಡೆಯಲು ಸಾಧ್ಯವಾಗಿಲ್ಲ. ಇನ್ನೂ ಹಲವು ಬುಕಿಂಗೇ ಮಾಡಿಲ್ಲ. ಹಾಗಿದ್ರೆ ಹೊಸತಾಗಿ ಹೇಗೆ HSRP ನಂಬರ್ ಪ್ಲೇಟ್  ಬುಕ್ ಮಾಡಬಹುದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ. 

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಕೇವಲ SIAM ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನುಫಾಕ್ಚರ್ಸ್ ಔದ್ಯೋಗಿಕ ವೆಬ್‍ಸೈಟ್‍ನಲ್ಲಿ ಮಾತ್ರ ಪಡೆಯಲು ಸಾಧ್ಯ.  ನಂಬರ್ ಪ್ಲೇಟ್‍ಗೆ ಅರ್ಜಿ ಹಾಕಲು ನೀವು ಆ ವೆಬ್‍ಸೈಟ್‍ನಲ್ಲಿ ಕೇಳುವ ಮಾತಿಗಳನ್ನು ತುಂಬಿಸಬೇಕಾಗುತ್ತದೆ. ಇದರಲ್ಲಿ ಸಾಧಾರಣವಾಗಿ ನಿಮ್ಮ ಹೆಸರು, ಈಮೈಲ್, ವಾಹನದ ನಂಬರ್, ಚೇಸಿಸ್ ನಂಬರ್, ರಾಜ್ಯದ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ. 


 




ಇದರ ಜೊತೆಗೆ ಅಲ್ಲಿ ಕೇಳುವ ಮೊತ್ತವನ್ನು ಯುಪಿಐ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ನಿಮ್ಮ ಕೆಲಸ ಮುಗಿದಂತೆಯೇ. ಇದಾದ ಬಳಿಕ, ಮುಂದಿನ ಪೇಜ್‍ನಲ್ಲಿ ನಿಮ್ಮ ಜಿಲ್ಲೆ, ನಿಮ್ಮಲ್ಲಿರುವ ವಾಹನದ ಮಾದರಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ಅಥವಾ ವಾಣಿಜ್ಯ ಉದ್ಯಮಕ್ಕೆ ಉಪಯೋಗಿಸುವ ವಾಹನವೇ ಎಂದು ತಿಳಿಸಬೇಕಾಗುತ್ತದೆ. ಇದಾದ ನಂತರ ನಿಮ್ಮ ವಾಹನ ಯಾವ ಬ್ರಾಂಡ್ ಎಂದು ಸಹ ಕೇಳುತ್ತಾರೆ. ಇದನ್ನು ಸೆಲೆಕ್ಟ್ ಮಾಡಿದ ಕೂಡಲೇ, ನೀವು bookmyhsrp.com, orderyourhsrp.com, getmyhsrp.com ಮತ್ತು makemyhsrp.com  ಎಂಬ ಈ ನಾಲ್ಕು ವೆಬ್‍ಸೈಟ್‍ಗಳಲ್ಲಿ ಒಂದಕ್ಕೆ ಭೇಟಿ ನೀಡುತ್ತೀರಿ. ಇದರಲ್ಲಿ ಯಾವುದಕ್ಕೆ ಹೋಗಬೇಕು ಎಂಬುದು ನಿಮ್ಮ ವಾಹನದ ಬ್ರಾಂಡ್ ಮೇಲೆ ನಿರ್ಧಾರಿತವಾಗಿರುತ್ತದೆ. 





ಈ ಪೇಜ್‍ನಲ್ಲಿಯೂ ನಿಮ್ಮ ವಿವರಗಳನ್ನು ನೀಡಿದ ನಂತರ ನೀವು ಅಂಗಡಿಯಲ್ಲಿ ಇದನ್ನು ಅಳವಡಿಸಲು ನಿರ್ಧರಿಸಿದರೆ ಆ ದಿನ ಮತ್ತು ಸಮಯವನ್ನು ಸಹ ನಿಗದಿ ಪಡಿಸಬೇಕಾಗುತ್ತದೆ. ಇನ್ನು ಇಲ್ಲಿ ನೀವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಯಾವ ವೆಬ್‍ಸೈಟ್ ಸಹ ಕ್ಯಾಶ್ ಆನ್ ಡೆಲಿವರಿ ಸೌಲಭ್ಯವನ್ನು ನೀಡುವುದಿಲ್ಲ. ಬದಲಾಗಿ, ಆನ್‍ಲೈನ್ ಪೇಮೆಂಟ್ ಮಾತ್ರ ಮಾಡಬೇಕಾಗುತ್ತದೆ. ನಿಮಗೆ ನಂಬರ್ ಪ್ಲೇಟ್ ಅನ್ನು ನಿಮ್ಮ ಮನೆಗೆ ಅಥವಾ ನಿಮ್ಮ ಸಮೀಪದಲ್ಲಿರುವ ಶೋ ರೂಮ್‍ಗೆ ಡೆಲಿವರಿ ಮಾಡಿಸಿಕೊಂಡು ಅಲ್ಲಿಂದ ಪಡೆಯಬಹುದಾಗಿದೆ. ನೀವು ಅಲ್ಲಿಂದ ನಿಮ್ಮ ವಾಹನದಲ್ಲಿ ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದಾಗಿದೆ. 










ಈ ಮೂಲಕ ನಿಮ್ಮ 2019ಕ್ಕಿಂತ ಮುಂಚೆ ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು. ಈ ಮೂಲಕ ದಂಡದಿಂದ ಪಾರಾಗಬಹುದು.