ಏಳಿಂಜೆ ದೇವಸ್ಥಾನದಲ್ಲಿ ಅಂಗಾರಿಕ ಸಂಕಷ್ಟಹರ ಪ್ರಯುಕ್ತ ಪೂಜೆ

 


ಕಿನ್ನಿಗೋಳಿ:   ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ  ಮಂಗಳವಾರ  ಅಂಗಾರಿಕ ಸಂಕಷ್ಟಹರ ಪ್ರಯುಕ್ತ ವಿಶೇಷ  ಪೂಜೆ ನಡೆಯಿತು. 


 ಬೆಳಿಗ್ಗೆ 5 ಕ್ಕೆ  ಬಾಲಗಣಪತಿ ಹೋಮ, 8 ಕ್ಕೆ ಗಣ ಹೋಮ, 8.30ಕ್ಕೆ : 108 ತೆಂಗಿನಕಾಯಿ ಗಣಹೋಮ ,9  ಕ್ಕೆ  ವಿಷ್ಣುಸಹಸ್ರನಾಮ ಹೋಮ,ಮಧ್ಯಾಹ್ನ  12.30 ಕ್ಕೆ  ಮಹಾಪೂಜೆ,  ಅನ್ನಸಂತರ್ಪಣೆ ಹಾಗೂ ಫಲಹಾರ ರಾತ್ರಿ ಗಂಟೆ 7.30ಕ್ಕೆ ಏಳಿಂಜೆಯ  ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ಮಹಿಳಾ ಮಂಡಳಿಯವರಿಂದ  ಯಕ್ಷಗಾನ ತಾಳಮದ್ದಳೆ ಪ್ರಸಂಗ ನರಕಾಸುರ ವಧೆ,  ಶ್ರೀ ಲಕ್ಷ್ಮೀ ಜನಾರ್ದನ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 10-25 ಕ್ಕೆ ಚಂದ್ರೋದಯ, ರಂಗ ಪೂಜೆ, ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ, ನಂತರ  ಮಹಾ ಅನ್ನಸಂತರ್ಪಣೆ ನಡೆಯಿತು.