ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿ ಎಂಬಾತನನ್ನು ಕ್ರೂರವಾಗಿ ಕೊಲೆಗೈದು ಜೈಲು ಪಾಲಾಗಿದ್ದಾರೆ. ದರ್ಶನ್ ಆಪ್ತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ.
ಪವಿತ್ರಾ ಗೌಡ ಹಾಗೂ ದರ್ಶನ್ ನಡುವೆ ಇರುವ ಪ್ರಣಯದ ಗಾಸಿಪ್ ಹೊಸದೇನಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರಾ ಗೌಡ ನಡುವೆ ಸೋಷಿಯಲ್ ಮೀಡಿಯಾ ವಾರ್ ಕೂಡ ನಡೆದಿತ್ತು. ಇದೀಗ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಮೃತ ರೇಣುಕಾ ಸ್ವಾಮಿ ಕಳುಹಿಸಿದ ಮೆಸೇಜ್ ಏನು? ಎಂಬುದರ ಬಗ್ಗೆ ವರದಿ ಹೀಗೆ ಹೇಳುತ್ತದೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕೆಂದು ಬಯಸಿದ್ದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಅಷ್ಟೇ ಅಲ್ಲದೇ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದಾನೆ. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ ಎನ್ನಲಾಗಿದೆ.
ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ 'ದರ್ಶನ್‌ಗಿಂತ ನಾನೇನು ಕಡಿಮೆ ಬಾ' ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್‌ಗೆ ಹೇಳಿದ್ದರು. ಜತೆಗೆ ಪವನ್‌ಗೂ ಕೂಡ 'ದರ್ಶನ್‌ಗೆ ಈ ವಿಷಯ ಹೇಳಬೇಡಿ. ದರ್ಶನ್ ಏನಾದ್ರು ಮಾಡಿಬಿಡ್ತಾನೆ' ಎಂದು ಪವಿತ್ರಾ ಹೇಳಿದ್ದರು. ಆದರೆ ಪವನ್ ಈ ವಿಚಾರ ದರ್ಶನ್ ಅವರಿಗೆ ಹೇಳಿದ್ದಾರೆ. ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕಿಟ್ರ್ಯಾಪ್ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಪೊಲೀಸ್ ತನಿಖೆಯಿಂದಲೇ ಅಸಲಿ ಸಂಗತಿ ತಿಳಿದು ಬರಬೇಕಾಗಿದೆ.

Social Icons