ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸಹಚರರು ಜೈಲು ಪಾಲಾಗಿದ್ದಾರೆ. ಇದೀಗ ಡಿ ಬಾಸ್ ಜೈಲೂಟ ಮಾಡಲಾಗದೆ ಪರದಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಐಷಾರಾಮಿ ಜೀವನ ನಡೆಸುತ್ತಾ ಬಿಂದಾಸ್ ಆಗಿ ಇರುತ್ತಿದ್ದ ದರ್ಶನ್, ಫಿಟೈಸ್ ಮೆಂಟೈನ್ ಮಾಡಲು ಚಿಕನ್, ಮಟನ್, ಫ್ರೂಟ್ಸ್‌ನೊಂದಿಗೆ ಜ್ಯೂಸ್ ಸೇವನೆ ಮಾಡುತ್ತಿದ್ದರು. ಆದರೆ ಇದೀಗ ಜೈಲಿನಲ್ಲಿ ಸರಿಯಾಗಿ ಉಪ್ಪು - ಕಾರವಿಲ್ಲದ ಸಾಂಬಾರ್, ಮುದ್ದೆ, ಅನ್ನ ತಿನ್ನಲು ಕಷ್ಟಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ರವಿವಾರ ರಾತ್ರಿಯೂ ಅವರಿಗೆ ಜೈಲು ಮೆನು ಪ್ರಕಾರ ಮುದ್ದೆ, ಅನ್ನ, ಚಪಾತಿ, ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದರು. ಆದರೆ ದರ್ಶನ್ ಜೈಲೂಟ ತಿನ್ನಲಾಗದೆ ಪರದಾಟ ನಡೆಸಿದ್ದಾರೆ ಎನ್ನಲಾಗಿದೆ.
ಈಮಧ್ಯೆ ಜೈಲಿನಲ್ಲಿ ಸರಿಯಾಗಿ ಊಟ ಸೇರದೆ, ನಿದ್ದೆಯೂ ಬಾರದೆ ದರ್ಶನ್ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ತಡವಾಗಿ ನಿದ್ರೆಗೆ ಜಾರಿ ಬೆಳಗ್ಗೆ 6 ಗಂಟೆಗೆ ಎಚ್ಚರಗೊಳ್ಳುತ್ತಾರೆ. ಬೆಳಗ್ಗೆ ನಾರ್ಮಲ್ ಕಾಫಿ ಸೇವಿಸದೆ ಬಿಸಿ ಕಾಫಿ ಕೇಳಿ ಪಡೆದಿದ್ದಾರೆ. ಜೊತೆಗೆ ಸಹಕೈದಿಗಳು ಮಾತನಾಡಲು ಯತ್ನಿಸಿದ್ರೂ ಅವರೊಂದಿಗೆ ಅಷ್ಟಾಗಿ ಬೇರೆಯುತ್ತಿಲ್ಲ ಎನ್ನಲಾಗುತ್ತಿದೆ ಎಂದು ತಿಳಿದು ಬಂದಿದೆ.

Social Icons