"ಕೈ ಮುಗಿತೀನಿ ಬಿಟ್ಟುಬಿಡಿ ಸರ್'' ಪ್ರಶ್ನಿಸುತ್ತಿರುವ ಪೊಲೀಸರ ಕಾಲಿಗೆ ಬಿದ್ದ 'ಡಿ ಬಾಸ್'



ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ವಿಚಾರಣೆಯ ಸಂದರ್ಭ ನಟ ದರ್ಶನ್ ಪೊಲೀಸರ ಕಾಲಿಗೆ ಬಿದ್ದಿದ್ದಾರೆಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಸಿಕ್ಕಿರುವ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ನಟ ದರ್ಶನ್‌ಗೆ ತನಿಖಾಧಿಕಾರಿಗಳ ಪ್ರಶ್ನೆ ಮಾಡುತ್ತಿದ್ದಾರೆ. ಪೊಲೀಸ್ ಭಾಷೆಯಲ್ಲಿ ಪ್ರಶ್ನಿಸುತ್ತಿದ್ದಂತೆ ದರ್ಶನ್ ಪೊಲೀಸರ ಕಾಲಿಗೆ ಬಿದ್ದಿದ್ದಾರೆ. "ನನ್ನದು ತಪ್ಪಾಗಿದೆ, ದಯವಿಟ್ಟು ಏನೂ ಕೇಳಬೇಡಿ ಸರ್, ಕೈ ಮುಗಿತೀನಿ ಬಿಟ್ಟುಬಿಡಿ, ನಂಗೆ ಗೂತ್ತಿರೋದನ್ನೆಲ್ಲಾ ಹೇಳಿದ್ದೀನಿ ಸರ್ . ಮತ್ತೆ ಏನೇನೋ ಕೇಳಬೇಡಿ" ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪೊಲೀಸರು ದರ್ಶನ್ ಮಾತಿಗೆ ಮಣಿಯದೆ ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಮೊದಲ ಐದು ದಿನದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ಯಾವ ಪ್ರಶ್ನೆಗಳಿಗೂ ತುಟಿಪಿಟಿಕ್ ಎಂದಿರಲಿಲ್ಲ. ಏನೇ ಕೇಳಿದ್ರು ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರ ಕೊಡುತ್ತಿದ್ದರು. ಅಲ್ಲದೆ ಉಡಾಫೆಯಿಂದಲೇ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ದರ್ಶನ್‌ಗೆ ಪೇಚಾಟ ಆರಂಭವಾಗಿದೆ. ಪೊಲೀಸ್ ಭಾಷೆಯಲ್ಲೇ ತನಿಖೆ ನಡೆಸಿದಾಗ ದರ್ಶನ್ ಸೈಲಂಟ್ ಆಗಿದ್ದಾರಂತೆ 'ಸರ್ ನನ್ನ ಬಿಟ್ಟು ಬಿಡಿ' ಎಂದು ಪೊಲೀಸರ ಕಾಲಿಗೆ ಬೀಳಲು ಹೋಗಿದ್ದಾರೆ ಎಂದು ವರದಿ ಆಗಿದೆ.

ದರ್ಶನ್ ಸ್ಟಾರ್ ಹೀರೋ. ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ.  ಸಮಾಜದಲ್ಲಿ ಉತ್ತಮ ಹೆಸರಿದೆ. ಆದ್ದರಿಂದ ದರ್ಶನ್ ಅವರನ್ನು ಸರಳವಾಗಿ ಪ್ರಶ್ನೆ ಮಾಡುವ ಆಲೋಚನೆ ಪೊಲೀಸರಿಗಿತ್ತು. ಆದರೆ, ಇದಕ್ಕೆಲ್ಲ ಪೊಲೀಸರಿಗೆ ಸಿಕ್ಕಿದ್ದು ಉಡಾಫೆಯ ಉತ್ತರ. ಆದ್ದರಿಂದ ಇದೀಗ, ತಮ್ಮ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಎರಡನೇ ಬಾರಿ ಕಸ್ಟಡಿಗೆ ಹೋದಾಗ ಪೊಲೀಸ್‌ ಸ್ಟೈಲ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಸರ್ ನನ್ನ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ದರ್ಶನ್ ಕೇಳಿಕೊಂಡಿದ್ದಾರಂತೆ. 'ಸರ್ ನಿಮಗೆ ಕೈ ಮುಗಿದು ಕೇಳಿಕೊಳೇನೆ ನನ್ನ ಬಿಟ್ಟು ಬಿಡಿ' ಎಂದು ಅವರು ಕೇಳಿದ್ದಾರಂತೆ. ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಾಗಿದೆ ನನ್ನ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದಿದಾರಂತೆ