ಬೆಂಗಳೂರು: ಪಾಪಿ ತಾಯಿಯೋರ್ವಳು ರೈಲು ಬೋಗಿಯ ಕಸದ ಡಬ್ಬಿಯಲ್ಲಿ ನವಜಾತ ಶಿಶುವನ್ನೇ ಎಸೆದು ಹೋದ ಘಟನೆ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ.
ಪಾಪಿ ತಾಯಿಯೊಬ್ಬಳು ಗಂಡು ಮಗುವನ್ನು ಕಸದ ಬುಟ್ಟಿಯಲ್ಲಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾಳೆ.ಹಸುಕಂದಮ್ಮ ಕಸದ ಡಬ್ಬಿಯಲ್ಲಿಯೇ ನರಳಿ ನರಳಿ ಜನಿಸಿದ ನಾಲ್ಕೈದು ಗಂಟೆಗಳಲ್ಲೇ ಪ್ರಾಣಬಿಟ್ಟಿದೆ.
ಮುಂಜಾನೆ ಪ್ರಶಾಂತಿ ಎಕ್ಸಪ್ರೆಸ್ ರೈಲಿನ ಕಸದ ಬುಟ್ಟಿಯಲ್ಲಿ ಮಗು ಪತ್ತೆಯಾಗಿದೆ. ಬಿಳಿಬಟ್ಟೆಯಲ್ಲಿ ಗಂಡುಶಿಶುವನ್ನು ಸುತ್ತಿ ಕಸದ ಬುಟ್ಟಿಗೆ ಹಾಕಲಾಗಿತ್ತು. ಕಸದ ಬುಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಕಂಡು ಪ್ರಯಾಣಿಕರು ಆಘಾತಕ್ಕೆ ಒಳಗಾಗಿದ್ದಾರೆ. ಪ್ರಯಾಣಿಕರ ಮಾಹಿತಿಯಿಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
.jpeg)
Social Icons