ಕಿನ್ನಿಗೋಳಿ:ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಚಿತ್ತರoಜನ್ ಶೆಟ್ಟಿ ಉಳೆಪಾಡಿ ಇವರ ನೇತೃತ್ವದಲ್ಲಿ, ದಾನಿಗಳ ಹಾಗೂ ಉಳೆಪಾಡಿ ಪಂಚಾಯತ್ ನ ಸಹಕಾರದೊಂದಿಗೆ ನಿರ್ಮಾಣಗೊಂಡ, ಉಳೆಪಾಡಿ ನಿವಾಸಿ ರೇವತಿ ದೇವಾಡಿಗರವರ ಮನೆಗೆ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಭೇಟಿ ನೀಡಿ ಅಂತಿಮ ಕಂತಿನ ಚೆಕ್ಕನ್ನು ರೇವತಿ ದೇವಾಡಿಗರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಚಿತ್ತರoಜನ್ ಶೆಟ್ಟಿ ಉಳೆಪಾಡಿ, ಪುರುಷೋತ್ತಮ್ ಶೆಟ್ಟಿ ಕಿನ್ನಿಗೋಳಿ, ನಿತಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Social Icons