ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಣ್ಯಗಳಿಂದ ತುಲಾಭಾರ ಸೇವೆ ಮಾಡಿ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿದ ಯಡಿಯೂರಪ್ಪ

 



ವರದಿ: ಪ್ರಕಾಶ್ ಕೋಡಿಂಬಾಳ


ಸುಬ್ರಹ್ಮಣ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿ ಸಂಕಷ್ಟ ನಿವಾರಣೆಯಾಗಲೆಂದು ಪ್ರಾರ್ಥಿಸಿದರು.


ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ವೇಳೆ ಯಡಿಯೂರಪ್ಪ ಅವರು ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ನಂತರದಲ್ಲಿ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಯಡಿಯೂರಪ್ಪರನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. 


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದಲೂ ದೇಗುಲದ ಅಧಿಕಾರಗಳು ಯಡಿಯೂರಪ್ಪ ಅವರನ್ನು ಸ್ವಾಗತಿಸಿದರು. ಯಡಿಯೂರಪ್ಪ ಅವರು ದೇವಸ್ಥಾನದಲ್ಲಿ ನಾಣ್ಯಗಳಿಂದ ತುಲಾಭಾರ ಮತ್ತು ಮಹಾಭಿಷೇಕ ಮಹಾಪೂಜೆ ಸೇವೆ ನಡೆಸಿದ್ದಾರೆ.


ಮಧ್ಯಾಹ್ನ ಸುಳ್ಯಕ್ಕೆ ಆಗಮಿಸುವ ಯಡಿಯೂರಪ್ಪರು, ಸುಳ್ಯದಲ್ಲಿ ನಿರ್ಮಾಣವಾದ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಬಿಎಸ್‌‌ವೈ ಅವರು ಸುಳ್ಯದ ಕಾರ್ಯಕ್ರಮ ಮುಗಿಸಿ ಸುಮಾರು 3 ಗಂಟೆಗಳ ವೇಳೆಗೆ ಗುಂಡ್ಯ,ಸಕಲೇಶಪುರ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವರು ಎಂದು ತಿಳಿದುಬಂದಿದೆ.