ಬಕ್ರೀದ್ ಪ್ರಯುಕ್ತ ಪ್ರಾಣಿ ಬಲಿಗೆ ಅವಕಾಶ: ಪಾಲಿಕೆ ಆದೇಶಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಣೆ
ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಹಿನ್ನೆಲೆಯಲ್ಲಿ ಪ್ರಾಣಿಬಲಿಗೆ ಅನುಮತಿ ನೀಡಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಜೂನ್ 17ರಂದು 67 ಖಾಶಗಿ ಮಾಂಸದ ಅಂಗಡಿಗಳು ಮತ್ತು ಪಾಲಿಕೆಯ 47 ಮಾರುಕಟ್ಟೆಗಳಲ್ಲಿ ಪ್ರಾಣಿ ಬಲಿಗೆ ಅನುಮತಿಸಿ ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮುಂಬೈನ ಜೀವ ಮೈತ್ರಿ ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿತ್ತು. ಬಿಎಂಸಿ ಸುತ್ತೋಲೆಗೆ ತುರ್ತು ತಡೆ ಕೋರಿದ್ದ ಜೀವ ಮೈತ್ರಿ ಟ್ರಸ್ಟ್ ಮತ್ತೊಬ್ಬರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡ ಬಾಂಬೆ ಹೈಕೋರ್ಟ್‌ನ ನ್ಯಾ. ಎಂ.ಎಸ್. ಸೋನಕ್ ಮತ್ತು ನ್ಯಾ ಕಮಲ್ ಖಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
Social Icons