ಪೆಟ್ರೋಲ್ ಡೀಸೇಲ್ ದರ ಏರಿಕೆ: ಬಂಟ್ವಾಳದಲ್ಲಿ ಬಿಜೆಪಿಯಿಂದ ರಸ್ತೆ ತಡೆ

 


ವರದಿ: ಹರೀಶ್ ಮಾಂಬಾಡಿ

ಪೆಟ್ರೋಲ್ ಡಿಸೇಲ್ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ಬಂಟ್ವಾಳ ಘಟಕದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಗುರುವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ, ಹೆದ್ದಾರಿ ತಡೆ ನಡೆಯಿತು.

ಶಾಸಕ ರಾಜೇಶ್ ನಾಯ್ಕ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು.  ಈಗ ನಾಲ್ಕನೇ ಸ್ಥಾನಕ್ಕೆ ಹಿಂದೆ ಸರಿದಿದೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ನೆಪದಲ್ಲಿ ಹಣವನ್ನು ಡೈವರ್ಟ್ ಮಾಡುತ್ತಿದ್ದು ಈ ಹಣ ಎಲ್ಲಿ ಹೋಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಭಿವೃದ್ದಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಬಿಟ್ಟಿ ಭಾಗ್ಯ ಕಾಂಗ್ರೆಸ್ ನಿಂದ ಹುಟ್ಟಿದ ತಳಿ. ಬಿಟ್ಟಿ ಭಾಗ್ಯದಿಂದ ಗರೀಭೀ ಹಠಾವೂ ಆಗಿಲ್ಲ ಗರೀಭಿ ಬಚಾವೋ ಆಗಿದೆ ಎಂದರು

ಬಿಜೆಪಿ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಸುಲೋಚನಾ ಭಟ್, ಪೂಜಾ ಪೈ, ರಾಮದಾಸ ಬಂಟ್ವಾಳ, ವಿಕಾಸ್ ಪುತ್ತೂರು, ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ಮಾಧವ ಮಾವೆ, ಪ್ರೇಮಾನಂದ  ಶೆಟ್ಟಿ, ರವೀಶ್ ಶೆಟ್ಟಿ, ಡೊಂಬಯ ಅರಳ, ಗೋವಿಂದ ಪ್ರಭು, ಪುರುಷೋತ್ತಮ ಶೆಟ್ಟಿ, ಸುರೇಶ್ ಕೋಟ್ಯಾನ್, ಪುರುಷೋತ್ತಮ ಸಾಲ್ಯಾನ್, ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಪ್ರಭಾಕರ ಪ್ರಭುಆನಂದ ಶಂಭೂರು ಮತ್ತಿತರರು ಭಾಗವಹಿಸಿದ್ದರು.