ಪಾಟ್ನಾ/ ಬಿಹಾರ: ಕೇವಲ ಒಂದು ವರ್ಷದ ಹಿಂದೆಯಷ್ಟೇ ಕಾಮಗಾರಿ ಮುಗಿದ ಎನ್ನಲಾದ ಸೇತುವೆಯೊಂದು ಕುಸಿದು ಬಿದ್ದು ನದಿ ಪಾಲಾದ ಘಟನೆ ಬಿಹಾರ ರಾಜ್ಯದ ಅರಾರಿಯಾದ ಸಿಕ್ತಿ ಎಂಬಲ್ಲಿ ನಡೆದಿದೆ.
ಇದು ಬಾಕ್ರಾ ನದಿಗೆ ಕಟ್ಟಲಾಗಿದ್ದ ಸೇತುವೆಯಾಗಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಶಾಸಕರೋರ್ವರು ಆರೋಪಿಸಿದ್ದಾರೆ.
ಇದು ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಎಂದು ತಿಳಿದು ಬಂದಿದ್ದು, ಕುಸಿತದ ಹಿನ್ನೆಲೆಯಲ್ಲಿ ಸೇತುವೆಯ ಮೂರು ಪಿಲ್ಲರ್‌ಗಳು ನದೀ ಪಾಲಾಗಿದೆ ಎಂದು ಹೇಳಲಾಗುತ್ತಿದೆ.

Social Icons