ಮೂಲ್ಕಿ: ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗಿನಿಂದಲೇ ಭಾರೀ ಮಳೆಯಾಗಿದೆ.
ಭಾರೀ ಮಳೆಗೆ ಬಪ್ಪನಾಡು ದೇವಸ್ಥಾನದ ಒಳಗಡೆ ನೀರು ನುಗ್ಗಿದೆ.
ಮುಲ್ಕಿಯ ಕಾರ್ನಾಡ್ ತಹಶೀಲ್ದಾರ್ ಕಚೇರಿ ಆವರಣ ಗೋಡೆಯೊಳಗೆ ನೀರು ನುಗ್ಗಿ ಕೃತಕ ನೆರೆ ಉಂಟಾಯಿತು.
ಶಿಮಂತೂರು ದೇವಸ್ಥಾನದ ಗ್ರಾಮೀಣ ಭಾಗದ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೆರೆ ನೀರಿನಿಂದ ಮುಳುಗಿದೆ. ಕಿನ್ನಿಗೋಳಿ ಪರಿಸರದ ಗುತ್ತಗಾಡು ಬಳಿ ಕೃತಕ ನೆರೆ ಉಂಟಾಗಿದ್ದು,, ತೋಕೂರು ಬಳಿ ಹಳೆಯ ಕಾಲದ ಕಾಲು ಸಂಕ ಕುಸಿದಿದೆ. ಉಳಿದಂತೆ ಅತಿಕಾರಿಬೆಟ್ಟು, ಹಳೆಯಂಗಡಿ ಪಡುಪಣಂಬೂರು ಪರಿಸರದಲ್ಲಿ ಉತ್ತಮ ಮಳೆಯಾಗಿದೆ.

Social Icons