ವರದಿ : ಕವಿತಾ ಕೆ ಮಾಣಿ
ಬಂಟ್ವಾಳ: ಈ ಹಿಂದೆ ಅಕ್ರಮ ಗೋ ಸಾಗಾಟ ಮತ್ತು ಗೋ ಮಾಂಸ ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಆಪಾದಿತ ವ್ಯಕ್ತಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಅವರು ಠಾಣೆಗೆ ಕರೆಯಿಸಿ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮುಂಬರುವ ಕೆಲ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಅಥವಾ ಗೋವುಗಳನ್ನು ಕಡಿಯುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೋಲೀಸ್ ಇಲಾಖೆ ಈ ಕ್ರಮವನ್ನು ಅನುಸರಿಸಿದೆ.
ಅಂತಹ ಯಾವುದೇ ವಿಚಾರಗಳು ಗಮನಕ್ಕೆ ಬಂದರೆ ಸಾರ್ವಜನಿಕರು ಕಾನೂನನ್ನುಕೈಗೆತ್ತಿಗೊಳ್ಳದೆ ಪೋಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Social Icons