Bantwal: ಲಾರಿ ಡೀಸೆಲ್ ಖಾಲಿ, ಹೆದ್ದಾರಿಯಲ್ಲೇ ಬಾಕಿ; ಮಳೆ ಜೊತೆ ಟ್ರಾಫಿಕ್ ಜಾಮ್




 ವರದಿ: ಹರೀಶ್ ಮಾಂಬಾಡಿ

ಬಂಟ್ವಾಳ:ಲಾರಿಯೊಂದರ ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಮೆಲ್ಕಾರ್ ಸಮೀಪದ ನರಹರಿ ಪರ್ವತದ ಬಳಿ ನಡೆದಿದೆ. 


ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಮಾಗ್ರಿಗಳನ್ನು ಕೊಂಡು ಹೋಗುತ್ತಿದ್ದ ಲಾರಿಯೊಂದರ ಡಿಸೇಲ್ ಖಾಲಿಯಾಗಿ ರಸ್ತೆಯ ಮಧ್ಯೆ ನಿಂತುಕೊಂಡ ಪರಿಣಾಮವಾಗಿ ಸುಮಾರು ಒಂದು ಗಂಟೆಗೂ ‌ಅಧಿಕ ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. 


ನರಹರಿಯಿಂದ ಸುಮಾರು ಎರಡು ಕಿ.ಮೀ ಅಂದರೆ ಪಾಣೆಮಂಗಳೂರು ವರೆಗೆ ರಸ್ತೆ ಉದ್ದಕ್ಕೆ ಸರತಿ ಸಾಲಿನಲ್ಲಿ ವಾಹನಗಳು ನಿಂತುಕೊಂಡು ದೃಶ್ಯ ಕಂಡು ಬಂತು. ಅ ಕಡೆಗೆ ಕಲ್ಲಡ್ಕ ದ ವರೆಗೂ ವಾಹನಗಳು ಸಾಲು ಕಂಡು ಬಂತು.