Bantwal: ತುಂಬೆ ತಿರುವಿನಲ್ಲಿ ಉರುಳಿದ ಪಿಕಪ್ ವಾಹನ

 



ವರದಿ; ಹರೀಶ್ ಮಾಂಬಾಡಿ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಮಂಗಳೂರು - ಬೆಂಗಳೂರು ಮಧ್ಯೆ  ತುಂಬೆ ತಿರುವಿನಲ್ಲಿ  ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ವಾಹನವೊಂದರ ಇಂಜಿನ್ ನನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ  ಉರುಳಿ ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ತುಂಬೆ ತಿರುವು ತುಂಬಾ ಅಪಾಯಕಾರಿಯಾಗಿದ್ದು ಅನೇಕ ವಾಹನಗಳು ಉರುಳಿ ಬೀಳುವುದರ ಬಗ್ಗೆ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಅನುಮತಿ ನೀಡಿ ವೇಗ ನಿಯಂತ್ರಣಕ್ಕೆ ರಬ್ಬರ್ ಹಂಪ್ಸ್ ಗಳನ್ನು ಹಾಕಿದರೆ ಸ್ವಲ್ಪಮಟ್ಟಿಗೆ ಅಪಘಾತ ಕಡಿಮೆಯಾಗಬಹುದು ಬಂಟ್ವಾಳ ಸಂಚಾರಿ ಎಸ್.ಐ.ಸುತೇಶ್ ತಿಳಿಸಿದ್ದಾರೆ.