ವರದಿ
: ಕವಿತಾ ಕೆ ಮಾಣಿ
ಬಂಟ್ವಾಳ:
ಮನೆಯೊಂದರ ಕಂಪೌಂಡ್ ಜರಿದು ಬಿದ್ದು ಪಾದಾಚಾರಿಗಳಿಬ್ಬರು ಗಾಯಗೊಂಡು
ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗುಡ್ಡೆಯಂಗಡಿ ಎಂಬಲ್ಲಿ ನಿನ್ನೆ ಮಧ್ಯ ರಾತ್ರಿ ವೇಳೆ ನಡೆದಿದೆ.
ಗುಡ್ಡೆಯಂಗಡಿ
ನಿವಾಸಿಗಳಾದ ಮಹಮ್ಮದ್ ಸಾಧಿಕ್, ಮಹಮ್ಮದ್
ರಫೀಕ್ ಎಂಬವರು ಗಾಯಗೊಂಡವರಾಗಿದ್ದು,ಇಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ
ಮಹಮ್ಮದ್ ಸಾಧಿಕ್ ಅವರಿಗೆ ಗಂಭೀರವಾಗಿ ಗಾಯವಾಗಿದ್ದು ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಗುಡ್ಡೆಯಂಗಡಿ ಅಬ್ದುಲ್
ರಹಮಾನ್ ಎಂಬವರ ಮನೆಯ ಕಂಪೌಂಡ್ ರಾತ್ರಿ ಸುರಿದ ಮಳೆಗೆ ರಸ್ತೆಗೆ ಬಿದ್ದಿದೆ.ಮಧ್ಯ ರಾತ್ರಿ ಸುಮಾರು 12 ಗಂಟೆ ವೇಳೆ ಲಾರಿ ನಿಲ್ಲಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಂಪೌಂಡ್ ಜರಿದು ಬಿದ್ದು ಇವರಿಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Social Icons