ಉತ್ತರ ಪ್ರದೇಶ: 2024ರ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ದುರ್ಘಟನೆಯೊಂದು ನಡೆದಿದೆ. ಗುಂಡು ತಗುಲಿ ಉತ್ತಪ್ರದೇಶ ವಿಶೇಷ ಭದ್ರತಾ ಪಡೆ ಯೋಧರೊಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ತಡರಾತ್ರಿ ದುರ್ಘಟನೆ ನಡೆದಿದೆ.
ರಾಮಮಂದಿರ
ಸಂಕೀರ್ಣದ 150 ಮೀಟರ್ ದೂರವಿರುವ
ಕೋಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್ ನಿರ್ಮಿಸಲಾಗುತ್ತಿದೆ. ದೇವಸ್ಥಾನದ ಭದ್ರತೆಗಾಗಿ ಯೋಗಿ
ಸರ್ಕಾರ ನಾಲ್ಕು ವರ್ಷಗಳ ಹಿಂದೆ ಎಸ್‌ಎಸ್‌ಎಫ್ ಪಡೆಯನ್ನು ರಚಿಸಿತ್ತು. . ಅಲ್ಲಿ ಶತ್ರುಘ್ನ
ವಿಶ್ವಕರ್ಮ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹಲವು ಭದ್ರತಾ ಸಿಬ್ಬಂದಿ ಕೂಡ ರಾತ್ರಿ
ಇದ್ದರು. ಈ ವೇಳೆ ಅವರ ಬಂದೂಕಿನಿಂದಲೇ
ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿ
ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೂ ಮುನ್ನ ಶತ್ರುಘ್ನ ಮೊಬೈಲ್ ನೋಡುತ್ತಿದ್ದ ಎಂದು
ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಪೊಲೀಸರು ಅವರ ಮೊಬೈಲ್ ಅನ್ನು ಕೂಡ ವಿಚಾರಣೆಗೆ
ಕಳುಹಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು
ತನಿಖೆ ನಡೆಸುತ್ತಿದ್ದಾರೆ.

Social Icons