ಪುತ್ತೂರು: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ - ಚೂರಿಯಿಂದ ಇರಿದ ನಟಿ ಅನುಷ್ಕಾ ಶೆಟ್ಟಿ ಮಾವ



ಪುತ್ತೂರು: ಹಿರಿಯ ನಾಗರಿಕರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯೊಂದು ಚೂರಿ ಇರಿತದೊಂದಿಗೆ ಅಂತ್ಯಗೊಂಡಿದೆ. ಘಟನೆಯಲ್ಲಿ ಪ್ರಖ್ಯಾತ ನಟಿಯೊಬ್ಬರ ಮಾವನಿಂದಲೇ ಚೂರಿ ಇರಿತವಾಗಿದೆ.

ಈ ಘಟನೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ನಡೆದಿದೆ. ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮಾವನಿಂದಲೇ ಚೂರಿಇರಿತವಾಗಿದೆ. ಸದ್ದು ಅಲಿಯಾಸ್ ಸದಾಶಿವ ಪೈ‌ ಎಂಬವರು ಚೂರಿ ಇರಿತಗೊಂಡವರು‌. ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮಾವ ಗುಣಶೇಖರ್ ಶೆಟ್ಟಿ ಚೂರಿ ಇರಿದವರು‌.

ವಾಹನ ಪಾರ್ಕಿಂಗ್ ಮಾಡುವ ವಿಚಾರದಲ್ಲಿ ನಡೆದ ವಾಗ್ವಾದ ತಾರಕಕ್ಕೇರಿ ಸದಾಶಿವ ಪೈಯವರಿಗೆ ಗುಣಶೇಖರ್ ಶೆಟ್ಟಿ ಚೂರಿಯಿಂದ ಇರಿದಿದ್ದಾರೆ. ಪರಿಣಾಮ ಸದಾಶಿವ ಪೈಯವರ ಕೈಗೆ ಗಾಯವಾಗಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.