ಯುವಕನ ಮೇಲೆ ಲೈಂಗಿಕ ದೌರ್ಜನ್ಯ: ಡಾ.ಸೂರಜ್ ರೇವಣ್ಣ ಅರೆಸ್ಟ್ Arrested



ಹಾಸನ: ಯುವಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಅವರು ಅರೆಸ್ಟ್ ಆಗಿದ್ದಾರೆಂದು ವರದಿಯಾಗಿದೆ.

ಶನಿವಾರ ರಾತ್ರಿಯಿಂದ ಸೆನ್ ಠಾಣೆಯಲ್ಲಿ ಡಾ.ಸೂರಜ್ ರೇವಣ್ಣರನ್ನು ವಿಚಾರಣೆಗೊಳಪಡಿಸಿದ್ದ ತನಿಖಾಧಿಕಾರಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಅವರು ಆರೋಪಿಯನ್ನು ಬಂಧಿಸಿದ್ದಾರೆ. ರವಿವಾರ ಮಧ್ಯಾಹ್ನ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಒಂದೆಡೆ ಹಲವಾರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಅವರ ಅಣ್ಣ ಡಾ.ಸೂರಜ್ ರೇವಣ್ಣ ಬಂಧನವಾಗಿದ್ದಾರೆ. ಈ ಮೂಲಕ ರೇವಣ್ಣ ಅವರ ಇಬ್ಬರು ಪುತ್ರರೂ ಗಂಭೀರ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವಂತಾಗಿದೆ.