ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೋ ವಂಚನೆಯೂ ಅಷ್ಟೇಮಟ್ಟಿಗೆ ಮುಂದುವರೆಯುತ್ತಿದೆ. ಸೈಬರ್ ಕ್ರೈಮ್ ಗಳಿಗೆ ಕಡಿವಾಣ ಹಾಕಲು ಸರಕಾರ ಚಾಪೆ ಕೆಳಗೆ ನುಸುಳಿದ್ರೆ ಖದೀಮರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಎಲ್ಲಾ ವಿಭಾಗಗಳಲ್ಲಿ ನಡೆದ ಸೈಬರ್ ವಂಚನೆ ಇದೀಗ ಬ್ಯಾಂಕಿಂಗ್ ಕ್ಷೇತ್ರದ ಹೆಸರಲ್ಲಿ ಆರಂಭಗೊಂಡಿದೆ. ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವ ಹಲವು ಮಾರ್ಗಗಳನ್ನು ಸೈಬರ್ ವಂಚಕರು ಕಂಡುಕೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿಯೇ ಸುಮಾರು 10,300 ಕೋಟಿ ರೂ ಅನ್ನು ಸೈಬರ್ ಖದೀಮರು ಬ್ಯಾಂಕ್ ಖಾತೆಗೆ ಖನ್ನ ಹಾಕಿ ದೋಚಿದ್ದಾರೆ ಎನ್ನುವ ಆಘಾತಕಾರಿ ಅಂಶ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ವರದಿಯಲ್ಲಿ ಬಹಿರಂಗಗೊಂಡಿದೆ.
ಇದೀಗ ಸೈಬರ್ ಖದೀಮರು ಬಳಸುತ್ತಿರುವ ಹೊಸ ಮಾರ್ಗ ಬ್ಯಾಂಕಿಂಗ್ ನ ಕೆವೈಸಿ ಅಪ್‌ಡೇಟ್ ವಿಚಾರ. ಈ ನೆಪದಲ್ಲಿ ಗ್ರಾಹಕರಿಗೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್ ಲಿಂಕ್ ಅನ್ನು ಮೆಸೇಜ್ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವುದು ಈಗ ಹೆಚ್ಚಾಗಿದೆ. ಕೆನರಾ ಬ್ಯಾಂಕ್, ಐಸಿಐಸಿಐ ಸೇರಿ ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳ ಹೆಸರಲ್ಲಿ ನಕಲಿ ಅಪ್ಲಿಕೇಶನ್ ಡೆವಲಪ್ ಮಾಡಿ, ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಹುನ್ನಾರ ಹೆಚ್ಚಾಗಿದೆ. ಆದ್ದರಿಂದ ಅನಾಮಧೇಯ ಹಾಗೂ ಅನುಮಾನಾಸ್ಪದ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್, ಇನ್‌ಸ್ಟಾಲ್ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳು ಹಾಗೂ ಸೈಬರ್ ಪೊಲೀಸರು ಸೂಚನೆ ನೀಡಿದ್ದಾರೆ.
ಹೇಗೆಲ್ಲಾ ವಂಚನೆ ನಡೆಯುತ್ತದೆ?
ಪ್ರಮುಖ ಪ್ರಧಾನ
ಬ್ಯಾಂಕ್‌ಗಳ ಲೋಗೋ ಬಳಸಿ ಬ್ಯಾಂಕಿಂಗ್ ಅಪ್ಲಿಕೇಶನ್ ಸೃಷ್ಟಿಸಲಾಗುತ್ತದೆ. ಕಸ್ಟಮರ್ ಸರ್ವೀಸ್
ಪಾಯಿಂಟ್ ಎಂಬ ನಕಲಿ ಅಪ್ಲಿಕೇಶನ್ ಪ್ಯಾಕೇಜ್‌ಗಳನ್ನು ಸೃಷ್ಟಿಸಿಕೊಂಡು, ಅದನ್ನ ಡೌನ್‌ಲೋಡ್ ಮಾಡಿಸುವ ಪ್ರಯತ್ನ ಮಾಡುತ್ತಾರೆ. ವಾಟ್ಸಾಪ್,
ಟೆಲಿಗ್ರಾಂ, ಸಾಮಾಜಿಕ ಜಾಲತಾಣಗಳ ಬಳಕೆ ಮೂಲಕ ವಂಚನೆ ಸಾಧ್ಯ. ಅವುಗಳ
ಮುಖಾಂತರ ನಕಲಿ ಎಪಿಕೆ ಫೈಲ್ ಅನ್ನು ಕಳುಹಿಸುತ್ತಾರೆ. ನಿಮ್ಮ ಮೊಬೈಲ್ ನಲ್ಲಿ ಮೊದಲು ಆ ಆಪ್ ಗಳನ್ನು ಇನ್‌ಸ್ಟಾಲ್ ಮಾಡಿಸುತ್ತಾರೆ. ಆಧಾರ್ ಕೆವೈಸಿ,
ಪಾನ್‌ಕಾರ್ಡ್ ವಿವರ,
ನಂಬರ್ ಅಪ್‌ಡೇಟ್
ಮಾಡಿಸುತ್ತಾರೆ. ನಂತರ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಇನ್‌ಸ್ಟಾಲ್ ಆಗುತ್ತಿದ್ದಂತೆ ಖಾತೆ ವಿವರ
ಪಡೆಯುತ್ತಾರೆ. ಆಮೇಲೆ ನೇರವಾಗಿ ಬ್ಯಾಂಕ್ ಖಾತೆಯಲ್ಲಿನ ನಿಮ್ಮ ಹಣವನ್ನು ತಮ್ಮ ಖಾತೆಗೆ
ವರ್ಗಾವಣೆ ಮಾಡಿಕೊಳ್ಳುತ್ತಾರೆ. ಈ ಮೂಲಕ ನಿಮ್ಮ ಖಾತೆಯಲ್ಲಿರುವ ಹಣ ಸುಲಭವಾಗಿ ವಂಚಕರ ಕೈಸೇರುತ್ತದೆ.
ಹೇಗೆ ಎಚ್ಚರಿಕೆ ವಹಿಸಬೇಕು?
ಡಿಜಿಟಲ್ ಯುಗದಲ್ಲಿ
ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲುವುದಿಲ್ಲ. ಹೀಗಾಗಿ ಬ್ಯಾಂಕ್ ಹೆಸರಲ್ಲಿ ವಾಟ್ಸ್ಯಾಪ್ ನಲ್ಲಿ
ಬರುವ ಅನುಮಾನಾಸ್ಪದ ಸ್ಮಾರ್ಟ್‌ಫೋನ್
ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಡಿ, ಇನ್‌ಸ್ಟಾಲ್
ಮಾಡುವುದು ಬೇಡ. ಇನ್‌ಸ್ಟಾಲ್
ಆಗಿಬಿಟ್ಟಿದ್ದರೆ, ತಕ್ಷಣ ಇಂಟರ್‌ನೆಟ್
ಡಾಟಾ ಆಫ್ ಮಾಡಿ, ನಂತರ ಆ
ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ. ಆ ಅಪ್ಲಿಕೇಶನ್‌ನ ಕ್ಯಾಷೆ ಕ್ಲಿಯರ್ ಮಾಡಿ. ಮೊಬೈಲ್ ಸೆಟ್ಟಿಂಗ್‌ನಲ್ಲಿ ಅಪ್ಲಿಕೇಶನ್
ಮ್ಯಾನೇಜ್ಮೆಂಟ್ / ಆಪ್ಸ್, ಡೌನ್‌ಲೋಡ್
ಪರಿಶೀಲನೆ ಮಾಡಿ. ಒಂದು ವೇಳೆ
ಅಪರಿಚಿತ ಫೈಲ್‌ಗಳು ಇದ್ದರೆ ಅವುಗಳನ್ನು ಡಿಲೀಟ್ ಮಾಡಿ, ಮೊಬೈಲ್ ನಲ್ಲಿ ಕ್ಲೀನ್ ಟೂಲ್ ಇದ್ದರೆ ಕ್ಲಿಯರ್ ಮಾಡಿಕೊಳ್ಳಿ.
ಇಷ್ಟೆಲ್ಲ ಎಚ್ಚರಿಕೆಗಳ ನಡುವೆಯೂ ಈ ರೀತಿಯಲ್ಲಿ ಮೋಸ
ಹೋದರೆ ಅಂದೇ ಸೈಬರ್ ಪೊರ್ಟಲ್ ಅಥವಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ವಂಚನೆಗೆ ಒಳಗಾಗಿರುವುದು
ತಿಳಿದ ಕೂಡಲೇ #67# ಗೆ ಡಯಲ್ ಮಾಡಿ
ಮೊಬೈಲ್ ಸಂಖ್ಯೆ ಸುರಕ್ಷಿತಗೊಳಿಸಿ. 1930ಗೆ ತಕ್ಷಣ ಕರೆ ಮಾಡಿ ದೂರು ನೀಡಬಹುದು.
Social Icons