ಈ ಜಮಾನಾದಲ್ಲಿ ಯಾವುದನ್ನೂ ನಂಬುವುದಕ್ಕಾಗುವುದಿಲ್ಲ ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಸ್ಟೋರಿಯಿದು. ಬೇರೆಯವರಿಗೆ ಮಾಡಿದ ಖಾಸಗಿ ಮೆಸೇಜುಗಳನ್ನು ಡಿಲೀಟ್ ಮಾಡಿಯೂ ತನ್ನ ಪತ್ನಿಗೆ ಮೆಸೇಜ್ ಗಳು ಸಿಕ್ಕಿ, ಸಿಕ್ಕಿಹಾಕಿಕೊಂಡಿರುವ ವ್ಯಕ್ತಿಯೊಬ್ಬ ಇದೀಗ ಪ್ರತಿಷ್ಠಿತ ಫೋನ್ ಬ್ರ್ಯಾಂಡ್ ಐಪೋನ್ ವಿರುದ್ಧ ಕೋರ್ಟ್ ಮೊರೆಹೋಗಿದ್ದಾರೆ.
ಇದು ಲಂಡನ್ ನಗರದ ದೊಡ್ಡ ಉದ್ಯಮಿಯೋರ್ವನ ಕಥೆ. ಆತ ಐಫೋನ್ ಬಳಸುತ್ತಿದ್ದ, ಆತನ ಮನೆಯವರೆಲ್ಲರೂ ಐಫೋನ್ ಬಳಸುತ್ತಿದ್ದರು. ಈತನ ಐಫೋನ್ ನಿಂದ ಕಳಿಸುತ್ತಿದ್ದ ಮೆಸೇಜ್ ಗಳು, ಪೋಟೋಗಳು ಇನ್ನಿತರ ಡೇಟಾ ಹಾಗೂ ಆತನ ಮನೆಯ ಇತರ ಸದಸ್ಯರು ವಿಲೇವಾರಿ ಮಾಡುತ್ತಿದ್ದ ಡೇಟಾ ಎಲ್ಲವೂ ಅದೇ ಮನೆಯ ಬೇರೆ ಸದಸ್ಯರ ಮೊಬೈಲಿನಲ್ಲಿ ವೀಕ್ಷಿಸಬಹುದಾಗಿತ್ತು. ಯಾಕೆಂದರೆ, ಆ ಎಲ್ಲಾ ಸದಸ್ಯರ ದತ್ತಾಂಶವು ಒಂದೇ ಆ್ಯಪಲ್ ಐಡೆಂಟಿಟಿ ನಂಬರ್ ನಲ್ಲಿ ಸೇವ್ ಆಗಿರುತ್ತಾದ್ದರಿಂದ ಆ ನಂಬರ್ ಬಳಸಿ ಮನೆಯ ಯಾರೊಬ್ಬರಾದರೂ ತಮ್ಮಲ್ಲಿನ ಆ್ಯಪಲ್ ಪರಿಕರಗಳಿಂದ ಆ ಸಂದೇಶಗಳು, ಮೆಸೇಜ್ ಗಳು, ವಿಡಿಯೋ ಇತ್ಯಾದಿಗಳನ್ನು ನೋಡಬಹುದು. ಈ ತಂತ್ರಜ್ಞಾನದ ಬಗ್ಗೆ ಆ ಬ್ಯುಸಿನೆಸ್ ಮ್ಯಾನ್ ಗೆ ಹೆಚ್ಚು ಗೊತ್ತಿರಲಿಲ್ಲ. ತನ್ನ ಬಿಸಿಬಿಸಿ ಬ್ಯುಸಿನೆಸ್ ಬಗ್ಗೆ ಆತ ಕಳುಹಿಸುತ್ತಿದ್ದ ಮೆಸೇಜ್ ಗಳೆಲ್ಲವೂ ವರ್ಚ್ಯುವಲ್ ಮೆಮೊರಿಯಲ್ಲಿ ಸಂಗ್ರಹವಾಗಿರುತ್ತಿದ್ದವು. ಇದು ಗೊತ್ತಿಲ್ಲದ ಆತ, ತನ್ನ ಮೊಬೈಲಿನಲ್ಲಿದ್ದ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದ. ಅಲ್ಲಿಗೆ, ತನ್ನೆಲ್ಲಾ ಅಡ್ನಾಡಿ ಆಟಗಳು ಹೆಂಡ್ತಿಗೆ ಕಾಣಿಸದಂತೆ ಸಾಕ್ಷ್ಯಾ ನಾಶ ಮಾಡಿದ್ದೇನೆ ಎಂದು ತಿಳಿದುಕೊಂಡಿದ್ದ. ಆದರೆ, ಆಕೆ, ಫ್ಯಾಮಿಲಿಯ ಆ್ಯಪಲ್ ಐಡಿ ಬಳಸಿ, ಮನೆಯಲ್ಲಿದ್ದ ಐಮ್ಯಾಕ್ ಬಳಸುತ್ತಿದ್ದಾಗ ಈ ಮೆಸೇಜ್ ಗಳು ಆಕೆಯ ಕಣ್ಣಿಗೆ ಬಿದ್ದಿವೆ. ಅದರಿಂದ ಆಕೆಯ ಪತಿಯ ಗೋಸುಂಬೆ ಬಣ್ಣ ಬಯಲಾಗಿದೆ. ಅದರಿಂದಾಗಿ, ಸಿಟ್ಟಿಗೆದ್ದಿರುವ ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ತನಗೆ ಮೋಸ ಮಾಡಿರುವ ಪತಿಯಿಂದ ತನಗೆ ವಿಚ್ಛೇದನ ನೀಡಬೇಕೆಂದು ಕೇಳಿಕೊಂಡಿದ್ದಾಳೆ.
ಈ ಬೆಳವಣಿಗೆಯಿಂದ ಸಿಟ್ಟಿಗೆದ್ದಿರುವ ಆ ಉದ್ಯಮಿಯು, ಆ್ಯಪಲ್ ಕಂಪನಿಯ ವಿರುದ್ಧ ದಾವೆ ಹೂಡಲು ಸಿದ್ಧನಾಗಿದ್ದಾನೆ. ಐಫೋನ್ ನಲ್ಲಿ ತಾನು ಡಿಲೀಟ್ ಮಾಡಿರುವ ಮೆಸೇಜ್, ಆ್ಯಪಲ್ ಐಡಿ ಮೂಲಕ ಬೇರೊಂದು ಆ್ಯಪಲ್ ಪರಿಕರದ ಮೂಲಕ ಲಗ್ಗೆಯಿಟ್ಟು ನೋಡಲು ಸಾಧ್ಯ ಎಂಬುದಾದರೆ ನಾವು ಮೆಸೇಜ್ ಡಿಲೀಟ್ ಮಾಡಿ ಪ್ರಯೋಜನವೇನು ಎಂದು ಆತ ದಾವೆಯಲ್ಲಿ ಪ್ರಶ್ನಿಸಲು ಆತ ನಿರ್ಧರಿಸಿದ್ದಾನೆ ಎಂದು ತಿಳಿದುಬಂದಿದೆ. ಈ ವಿಚಾರ ಸೋಷಿಯಲ್ ಮೀಡಿಯಾದ ಲ್ಲಿ ಕೂಡ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Social Icons