ನಿಮ್ಮ Aadhaar Cardಗೆ 10 ವರ್ಷ ಆಗಿದೆಯೇ?| ಹಾಗಿದ್ರೆ ತಪ್ಪದೇ ಅಪ್ಡೇಟ್ ಮಾಡಿಸಿಕೊಳ್ಳಿ| ಹೇಗೆ ಮಾಡೋದು? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದವರಿಗೆ ಇದು ಸಿಹಿ ಸುದ್ದಿ. ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಕಾಲಾವಧಿಯನ್ನು ಸೆ.14ರವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ಆಧಾರ್ ಕಾರ್ಡನ್ನು ಶುಲ್ಕ ಇಲ್ಲದೇ ಸೆಪ್ಟೆಂಬರ್ 14ರವರೆಗೂ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದಾಗಿದೆ. ಈ ಮೊದಲು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್‌ ಮಾಡಲು ಮಾರ್ಚ್ 14ರವರೆಗಿನ ಗಡುವು ನೀಡಲಾತ್ತು. ಆ ಬಳಿಕ, ಅವಧಿಯನ್ನು ಜೂನ್ 14ರವೆರೆಗೆ ವಿಸ್ತರಿಸಲಾಯ್ತು.ಇದೀಗ ಮತ್ತೊಂದು ಸುತ್ತಿನ ಗಡುವು ಲಭಿಸಿದ್ದು, ಸೆ.14ರವರೆಗೂ ಉಚಿತವಾಗಿ ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು.



ಸರ್ಕಾರದ ಸುತ್ತೋಲೆಯ ಪ್ರಕಾರ ಕಾರ್ಡ್‌ ಪಡೆದು 10ಕ್ಕೂ ಹೆಚ್ಚು ವರ್ಷಗಳಾಗಿದ್ದು ಅದನ್ನು ಅಪ್ಡೇಟ್ ಮಾಡದೇ ಇರುವವರು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನೀವು ಆಧಾರ್‌ ಕಾರ್ಡ್‌ ಪಡೆದು ಅಥವಾ, ಅಪ್ಡೇಟ್‌ ಮಾಡದೆ 10 ವರ್ಷಗಳಿಗಿಂತ ಹೆಚ್ಚು ಸಮಯವಾಗಿದ್ದರೆ, ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ಹಲವರು ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಸಿಲ್ಲ. ಸಣ್ಣ ವಯಸ್ಸಿನಲ್ಲಿ ಕಾರ್ಡ್‌ ಮಾಡಿಸಿದ್ದರೆ, ಈಗ ಬೆರಳಚ್ಚು ಗುರುತು ಮಾಸಿರಬಹುದು. ಅಥವಾ ಮೊದಲಿನಂತೆ ಸರಿಯಾಗಿ ಮೂಡದಿರಬಹುದು. ಹೀಗಾಗಿ, ಕಾರ್ಡ್‌ಗೆ ಬಳಕೆದಾರರ ಬಯೋಮೆಟ್ರಿಕ್ ಮಾಹಿತಿ ಅಪ್ಡೇಟ್ ಮಾಡಿಸುವುದು ಅಗತ್ಯ. ಆಧಾರ್‌ನಲ್ಲಿರುವ ತಮ್ಮ ವಿವರದಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ತಮ್ಮ ಗುರುತು ದಾಖಲೆ ಮತ್ತು ವಿಳಾಸ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಸರ್ಕಾರದ ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ, ಇಲ್ಲಿ ಉಚಿತವಾಗಿ ಈ ಪ್ರಕ್ರಿಯೆಯನ್ನು ಮಾಡಬಹುದು.

 

 

ಆಧಾರ್‌ನಲ್ಲಿ ಏನೆಲ್ಲಾ ಅಪ್ಡೇಟ್‌ ಮಾಡಬಹುದು?

 

  • ಆಧಾರ್ ಕಾರ್ಡ್‌ದಾರರ ಹೆಸರು ಬದಲಾವಣೆ
  • ಜನ್ಮದಿನಾಂಕ ಬದಲಾವಣೆ
  • ಫೋಟೋ ಬದಲಾವಣೆ
  • ಮನೆಯ ವಿಳಾಸ ಬದಲಾವಣೆ
  • ಹೊಸ ಮೊಬೈಲ್ ಸಂಖ್ಯೆ ಅಪ್ಡೇಷನ್
  • ಇಮೇಲ್ ಐಡಿ ಬದಲಾವಣೆ

 

ನೀವೇ ಹೇಗೆ ಆನ್ಲೈನ್ ನಲ್ಲಿ ಅಪ್ಡೇಟ್ ಮಾಡಬಹುದು? ಇಲ್ಲಿದೆ ನೋಡಿ ಮಾಹಿತಿ

  • ಮೊದಲಿಗೆ ಆಧಾರ್ ಕಾರ್ಡ್ ನ  ಅಧಿಕೃತ ವೆಬ್ ಸೈಟ್  UIDAIhttps://uidai.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.


  • ವೆಬ್‌ಸೈಟ್‌ನಲ್ಲಿ 'My Aadhaar' ಮೇಲೆ ಕ್ಲಿಕ್ ಮಾಡಿ, ಈ ಮೆನುವಿನಿಂದ 'Update Your Aadhaar' ಆಯ್ಕೆ ಮೇಲೆ ಕ್ಲಿಕ್ ಮಾಡಿ. ‌


  • ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ರಿಜಿಸ್ಟರ್‌ಡ್‌ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಲಾಗಿನ್ ಆಗಿ.


  • ಮುಂದಿನ ಪೇಜ್‌ನಲ್ಲಿ ನೀವು ಆಧಾರ್ ಕಾರ್ಡ್ ಅಪ್ಡೇಟ್‌ ಆಯ್ಕೆಯನ್ನು ಕ್ಲಿಕ್ ಮಾಡಬೇಕು.


  • ಇಲ್ಲಿ ನೀವು ಅಪ್ಡೇಟ್‌ ಮಾಡಬೇಕಾದ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. (ಹೆಸರು, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸ ಬದಲಾಯಿಸಬೇಕಿದ್ದರೆ ಆ ಆಯ್ಕೆಯನ್ನು ಆಯ್ಕೆ ಮಾಡಿ).


  • ಬಳಿಕ, ಆಧಾರ್ ಅಪ್ಡೇಟ್‌ ಮಾಡಲು ಮುಂದುವರಿಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.


  • ಅಪ್ಡೇಟ್ ಮಾಡಬೇಕಾದ ಆಯ್ಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲವೂ ಸರಿ ಇದ್ದರೆ ಸಬ್ಮಿಟ್ ಮಾಡಬಹುದು.
  • ಈ ವೇಳೆ ನಿಮಗೆ ಒಂದು ವಿನಂತಿ ಸಂಖ್ಯೆ ಬರುತ್ತದೆ. ಈ ನಂಬರ್‌ ಸೇವ್ ಮಾಡಿ ಇಟ್ಟುಕೊಳ್ಳಿ.
  • ಅಪ್ಡೇಟ್ ಮಾಡಿದ ಕೆಲವೇ ದಿನಗಳಲ್ಲಿ ಅಪ್ಡೇಟೆಟ್ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.
  •  

ಒಂದು ವೇಳೆ ನಿಮಗೆ ಆನ್‌ಲೈನ್‌ನಲ್ಲಿ ಅಪ್ಡೇಟ್‌ ಮಾಡಲು ಸಾಧ್ಯವಾಗದಿದ್ದರೆ, ಆಧಾರ್ ಕೇಂದ್ರಗಳಿಗೆ ಹೋಗಿ ಅಪ್ಡೇಟ್‌ ಪ್ರಕ್ರಿಯೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ  50 ರೂ. ಸೇವಾಶುಲ್ಕ ನೀಡಬೇಕಾಗುತ್ತದೆ. ಉಳಿದಂತೆ ನಾವೇ ಆನ್ಲೈನ್ ಮೂಲಕ ಮಾಡಿದರೆ ಈ ಖರ್ಚನ್ನು ಉಳಿಸಬಹುದಾಗಿದೆ.