ಮೈಮೇಲೆ 5ಕೆಜಿ ಚಿನ್ನ ಧರಿಸಿ ಓಡಾಡುವ ಬಂಗಾರದ ಮನುಷ್ಯ - ಇವರ ಬೈಕ್ ಕೂಡಾ ಚಿನ್ನದ್ದೇ



ಬಿಹಾರ: ಬಿಹಾರದಲ್ಲಿ "ಬಂಗಾರದ ಮನುಷ್ಯ"ನೆಂದೇ ಪ್ರಖ್ಯಾತರಾಗಿರುವ ಪ್ರೇಮ್ ಸಿಂಗ್ ಎಂಬ ಈ ವ್ಯಕ್ತಿ ಬಂಗಾರದ ಮೇಲಿನ ಪ್ರೀತಿಯಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ತಮ್ಮ ದೇಹದ ಮೇಲೆ ಸುಮಾರು ಐದು ಕಿಲೋ ಚಿನ್ನದೊಡವೆಗಳನ್ನು ಧರಿಸುವ ಸ್ವರ್ಣಪ್ರಿಯ. ಇವರ ಬೈಕ್ ಕೂಡಾ ಬಂಗಾರದ್ದೆ ಆಗಿದೆ. ವಿಚಿತ್ರವೆನಿಸಿದರೂ ಇದು ಖಚಿತ ಸುದ್ದಿ. ಇವರ ಕುರಿತಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೈತುಂಬಾ ಚಿನ್ನದೊಡವೆ ಧರಿಸುತ್ತಿದ್ದ ಪ್ರೇಮ್ ಸಿಂಗ್ ಈಗ ತಮ್ಮ ಬೈಕ್‌ಗೂ ಚಿನ್ನವನ್ನು ಅಳವಡಿಸಿ ಸುದ್ದಿಯಲ್ಲಿದ್ದಾರೆ. ಇವರ ಬೈಕ್ ಕೆಲ ಭಾಗಗಳು ಚಿನ್ನದ್ದಾಗಿವೆ. ಇದನ್ನು ಬೆಂಗಳೂರಿನಲ್ಲಿ ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಸುಮಾರು ಏಳರಿಂದ ಎಂಟು ತಿಂಗಳ ಅವಧಿಯಲ್ಲಿ ಈ ಬಂಗಾರದ ಬೈಕ್ ತಯಾರಾಗಿದೆ. ಇದರ ಬೆಲೆ 11ರಿಂದ 12 ಲಕ್ಷ ರೂಪಾಯಿ ಎನ್ನಲಾಗಿದೆ.



ಸ್ವರ್ಣದ  ಮೋಹದಿಂದಾಗಿ ಪ್ರೇಮ್ ಸಿಂಗ್ ಬಿಹಾರದ 'ಬಂಗಾರದ ಮನುಷ್ಯ' ಎಂದೇ ಖ್ಯಾತರು. ಇವರು ತೊಡುವ ಸರ, ಬಳೆ, ಉಂಗುರಗಳು ಒಟ್ಟು ಐದು ಕೆಜಿ ತೂಗುತ್ತವೆ.

'ನನ್ನನ್ನು ಜನ ಬಂಗಾರದ ಮನುಷ್ಯ ಎಂದು ಕರೆಯುತ್ತಾರೆ. ಬಿಹಾರದಲ್ಲಿ ಪ್ರಸ್ತುತ ಇರುವ ನಿತೀಶ್ ಕುಮಾರ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಆದ ಕಾರಣ ನನಗೆ ಯಾವುದೇ ಭಯವಿಲ್ಲ. ನನ್ನ ಬೈಕಿನಲ್ಲಿ 150 ರಿಂದ 200 ಗ್ರಾಂ ಚಿನ್ನವಿದೆ' ಎಂದಿರುವ ಪ್ರೇಮ್ ಸಿಂಗ್ ಇದು ಬಿಹಾರ ಸರ್ಕಾರ ಹಾಗೂ ಬಿಹಾರ ಪೊಲೀಸರ ಪಾಲಿಗೆ ಗೌರವದ ಸಂಗತಿ ಎಂದಿದ್ದಾರೆ.