ಅಂಚೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ| 4000 ಹುದ್ದೆಗಳಿಗೆ ಅರ್ಜಿ ಆಹ್ವಾನ India Post GDS Recruitment

 ಸರಕಾರಿ ಉದ್ಯೋಗಾವಕಾಶ ಅರಸುತ್ತಿರುವವರಿಗೆ ಇದು ಶುಭ ಸುದ್ದಿ. ಎಸೆಸೆಲ್ಸಿ ಪಾಸ್ ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಸುಮಾರು 4000 ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ. ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸುವವರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಸದ್ಯಕ್ಕೆ ಇಂಡಿಯಾ ಪೋಸ್ಟ್ ಜಿಡಿಎಸ್ ರಿಕ್ರೂಟ್ ಮೆಂಟ್ 2024 ಖಾಲಿ ಇರುವ 4000 ಗ್ರಾಮೀಣ ಡಾಕ್ ಸೇವಕ್, ಪೋಸ್ಟಲ್ ಅಸಿಸ್ಟೆಂಟ್, ಮಲ್ಟಿಟಾಸ್ಕಿಂಗ್ ಸ್ಟಾಫ್, ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.




ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಬೇರೆ ಬೇರೆ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

ಗ್ರಾಮೀಣ ಡಾಕ್ ಸೇವಕ ಹುದ್ದೆ: ಈ ಹುದ್ದೆಗೆ ಅಭ್ಯರ್ಥಿಯು ಕಡ್ಡಾಯವಾಗಿ ಯಾವುದೇ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ 10th ಅಥವಾ SSLC ಅಥವಾ ಮೆಟ್ರಿಕ್ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಗಣಿತ ಮತ್ತು ವಿಜ್ಞಾನ ವಿಷಯವನ್ನು ಕಡ್ಡಾಯವಾಗಿ ಓದಿರಬೇಕು. ಶೇಖಡಾ 50% ಅಂಕಗಳನ್ನು ಪಡೆದಿರಬೇಕು. ಕನಿಷ್ಠ 18ರಿಂದ 40  ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.

 ಪೋಸ್ಟಲ್ & ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆ:ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಯು ಕಡ್ಡಾಯವಾಗಿ ಯಾವುದೇ ವಿಷಯದಲ್ಲಿ ಪದವಿಯನ್ನು ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿದೆ. ಇಲ್ಲಿ ವಯಸ್ಸಿನ ಮಿತಿ ಕನಿಷ್ಟ 18 ವರ್ಷಗಳು. ಗರಿಷ್ಠ 27 ವರ್ಷಗಳು.

 ಪೋಸ್ಟ್ ಮ್ಯಾನ್: ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸರಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12th ಅಥವಾ PUC ಶಿಕ್ಷಣ ಪಡೆದಿರಬೇಕು. ಕನಿಷ್ಠ 18ರಿಂದ 27 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.

 ಮಲ್ಟಿಟಾಸ್ಕಿಂಗ್ ಸ್ಟಾಫ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ 10th ಅಥವಾ SSLC ಅಥವಾ ಮೆಟ್ರಿಕ್ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಶೇಖಡಾ 50% ಅಂಕಗಳೊಂದಿಗೆ ಪಡೆದಿರಬೇಕು ಪಡೆದಿರಬೇಕು. ಗಣಿತ ಮತ್ತು ವಿಜ್ಞಾನ ವಿಷಯವನ್ನು ಕಡ್ಡಾಯವಾಗಿ ಓದಿರಬೇಕು. ಇಲ್ಲಿ ವಯಸ್ಸಿನ ಮಿತಿ 18ರಿಂದ 25 ವರ್ಷಗಳು.

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಚೆ ಇಲಾಖೆ ಸೂಚಿಸಿರುವ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ತಪ್ಪಿದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಸಂಬಂಧಿತ ದಾಖಲೆಗಳನ್ನು ನೀಡುವ ಮೂಲಕ ತಮ್ಮ ಜಾತಿ ವರ್ಗಕ್ಕೆ ಅನುಗುಣವಾಗಿ ವಯಸ್ಸಿನ ಸಡಿಲಿಕೆಯ ಪ್ರಯೋಜನವನ್ನು ಪಡೆಯಬಹುದು.

ಅರ್ಜಿ ಸಲ್ಲಿಕೆಗೆ ಬೇಕಾದ ಅಗತ್ಯ ದಾಖಲೆಗಳು

  • ·         ಸಂಬಂಧಿತ ಶೈಕ್ಷಣಿಕ ಸರ್ಟಿಫಿಕೇಟ್ಗಳು
  • ·         ವಾಸ್ತವ್ಯ ಪ್ರಮಾಣಪತ್ರ
  • ·         ಆಧಾರ್ ಕಾರ್ಡ್
  • ·         ಜಾತಿ & ಆದಾಯ ಪ್ರಮಾಣ ಪತ್ರ
  • ·         ಕಂಪ್ಯೂಟರ್ ಕೌಶಲ್ಯ ಪ್ರಮಾಣಪತ್ರ
  • ·         ವಯಸ್ಸಿನ ಪ್ರಮಾಣ ಪತ್ರ
  • ·         ಸಹಿಯ ಸ್ಕ್ಯಾನ್ ಕಾಪಿ
  • ·         ಪಾಸ್ಪೋರ್ಟ್ ಸೈಝ್ ಫೋಟೋಗಳು

ಈ ಎಲ್ಲಾ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಭ್ಯರ್ಥಿಯು ತನ್ನ ಮೊಬೈಲ್ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ಇಟ್ಟುಕೊಳ್ಳಬೇಕು. ಅರ್ಜಿ ನಮೂನೆಯನ್ನು ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ. ವಿವಿಧ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಿದ್ಧವಿರಬೇಕು. ಅಧಿಸೂಚನೆಯಲ್ಲಿ ತಿಳಿಸಿದ ದಿನಾಂಕಕ್ಕೆ ಮೊದಲು ಅಭ್ಯರ್ಥಿಯು ಸಲ್ಲಿಸುವ ದಾಖಲೆಗಳು ಮಾನ್ಯವಾಗಿರಬೇಕು.

 ಅರ್ಜಿ ಸಲ್ಲಿಕೆ ಹೇಗೆ?

  • ಅರ್ಹ ಅಭ್ಯರ್ಥಿಗಳು Indian Post Office official website or India Post GDS official website ಗೆ ಭೇಟಿ ನೀಡಬೇಕು.
  •  ಅಲ್ಲಿ Recruitment ಗೆ ಕ್ಲಿಕ್ ಕೊಡಬೇಕು.
  •  ನಿಮ್ಮ ಆಯಾ ರಾಜ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು, ಅಲ್ಲಿ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.
  • ಇಲ್ಲಿ ನಿಮಗೆ ಎರಡು ಹಂತ ಇರುತ್ತದೆ. ಮೊದಲನೇ ಹಂತದಲ್ಲಿ ನೀವು Registration ಮಾಡಿಕೊಳ್ಳಬೇಕಾಗುತ್ತದೆ.
  • ಎರಡನೇ ಹಂತದಲ್ಲಿ Apply Online ಕ್ಲಿಕ್ ಮಾಡಿ ನೀವು ಬಯಸಿದ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. 
  •  ನಂತರ ಸೂಕ್ತ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  •  ನಂತರ Application Fee ಅನ್ನು ಕೊಟ್ಟಿರುವ ಮಾಹಿತಿ ಆಧಾರದಲ್ಲಿ online ನಲ್ಲಿ ಪಾವತಿ ಮಾಡಿ.
  •  ಕೊನೆಗೆ ನಿಮ್ಮ ಅರ್ಜಿಯ ಒಂದು ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳಿ.
  •  ಅರ್ಜಿ ನಮೂನೆ ಭರ್ತಿ ಮಾಡುವಾಗ ನೀವು ಅರ್ಜಿ ಸಲ್ಲಿಸುವ ಜೋನ್ ಅಥವಾ ಪೋಸ್ಟಲ್ ಏರಿಯಾ ಗಮನಿಸಿಕೊಳ್ಳಿ. ಅದೇ ವೆಬ್ ಪೇಜ್ ನಲ್ಲಿ ಆಯಾಯ ರಾಜ್ಯ ಜಿಲ್ಲೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ.

ಸದ್ಯದ ಮಾಹಿತಿ ಪ್ರಕಾರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯ ಬಗ್ಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ಆಯಾ ಹುದ್ದೆಗೆ ಅನುಗುಣವಾಗಿ ಕೇಳಲಾಗಿರುವ ಶಿಕ್ಷಣದಲ್ಲಿ ಪಡೆದಿರುವ ಮೆರಿಟ್ ಆಧಾರದಲ್ಲಿ ಮೊದಲ ಆಯ್ಕೆ ಪಟ್ಟಿ ಸಿದ್ಧವಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಅಭ್ಯರ್ಥಿಯ ದಾಖಲೆಗಳ ಪರಿಶೀಲನೆಯ ನಂತರ ಕೊನೆಯ ಆಯ್ಕೆ ಪಟ್ಟಿ ಸಿದ್ಧಗೊಳ್ಳುತ್ತದೆ. ಈ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಬಹುದು.