ಹದಗೆಟ್ಟಿದ್ದ ಪಂಜಳ- ಪರ್ಪುಂಜ ರಸ್ತೆ: ದುರಸ್ತಿಯ ಮನವಿಗೆ 24 ಗಂಟೆಯೊಳಗೆ ಸ್ಪಂದಿಸಿದ ಶಾಸಕ ಅಶೋಕ್ ರೈ

 



ವರದಿ: ಕವಿತಾ ಕೆ ಮಾಣಿ

ಪುತ್ತೂರು ತಾಲೂಕಿನ ಪಂಜಳದಿಂದ ಪರ್ಪುಂಜಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡ ಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕೆಲವು ತಿಂಗಳಿಂದ ಈ ರಸ್ತೆಯು ಸಂಪೂರ್ಣ ಹಾಳಾಗಿತ್ತು. ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಶಾಸಕ ಅಶೋಕ್ ರೈಯವರಲ್ಲಿ ಮನವಿ ಮಾಡಿದ್ದರು. 



ಇದೀಗ ಮನವಿಗೆ ಸ್ಪಂದಿಸಿದ ಶಾಸಕರು ಅದೇ ದಿನ ಜಿಪಂ ಇಂಜನಿಯರ್‌ಗೆ ಕರೆ ಮಾಡಿ ಪಂಜಳ ಪರ್ಪುಂಜ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಿಲ್ಲ. ರಿಕ್ಷಾ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಈ ರಸ್ತೆಯನ್ನು ತಕ್ಷಣ ವೆಟ್ ಮಿಕ್ಸ್ ಹಾಕಿ ದುರಸ್ಥಿ ಮಾಡಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.

ರಸ್ತೆಯನ್ನು ದುರಸ್ಥಿ ಮಾಡುವಂತೆ ಶಾಸಕ ಅಶೋಕ್ ರೈಯವರು ಇಂಜಿನಿಯರ್‌ಗೆ ಸೂಚನೆ ನೀಡಿದ 24 ಗಂಟೆಯೊಳಗೆ ರಸ್ತೆ ಕಾಮಗಾರಿ ನಡೆಸಲಾಗಿದೆ. ವೆಟ್ ಮಿಕ್ಸ್ ಹಾಕಿ ಹೊಂಡವನ್ನು ಮುಚ್ಚಲಾಗಿದೆ. ಕಳೆದ ಕೆಲವು ತಿಂಗಳಿಂದ ಹೊಂಡಮಯವಾಗಿದ್ದ ರಸ್ತೆಗೆ ಮುಕ್ತಿ ನೀಡಲಾಗಿದೆ.