ಜು. 22ರಿಂದ ಮಂಗಳೂರಿನಿಂದ ಅಬುಧಾಬಿಗೆ ದಿನಂಪ್ರತಿ AIR INDIA EXPRESS ವಿಮಾನ ಸಂಚಾರ

 


 KANNADA ALERT DESK

ಮಂಗಳೂರು: ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆ ಯನ್ನು ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ಧಾರ ಮಾಡಿದೆ. ಈವರೆಗೆ ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ವಿಮಾನ ಗಳು ಜುಲೈ 22ರಿಂದ ನಿತ್ಯ ಕಾರ್ಯಾಚರಿಸಲಿವೆ.

 

ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 1 ವಿಮಾನ ಸೇರಿ ನಿತ್ಯ 5 ವಿಮಾನಗಳು ಬೆಂಗಳೂರು - ಮಂಗಳೂರು ನಡುವೆ ಕಾರ್ಯಾಚರಿಸುತ್ತಿವೆ. ಜುಲೈ 8ರಿಂದ ಈ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ.

 

ಏರ್ ಇಂಡಿಯಾ ಎಕ್ಸ್‌ಪ್ರೆಸ್ 2 ನೇ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಯಾನ ಆರಂಭಿಸುತ್ತಿದೆ. ಇದು ಜು.22ರಿಂದ ಲಭ್ಯವಾಗಲಿದ್ದು, ಇದು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿ ಸಲಿದ್ದು, ಈ ವಿಮಾನ ಮಂಗಳೂರಿಗೆ ಬಂದು ಅಬುಧಾಬಿಗೆ ಪ್ರಯಾಣಿಸಲಿದೆ.

 

ಬೆಂಗಳೂರಿಗೆ ಇನ್ನಷ್ಟು ವಿಮಾನ

 

ಆಗಸ್ಟ್ 1ರಿಂದ ಬೆಂಗಳೂರು- ಮಂಗಳೂರು ವಿಭಾಗದಲ್ಲಿ ವಾರದಲ್ಲಿ ಮೂರು ದಿನ (ಸೋಮ, ಬುಧ ಮತ್ತು ಶುಕ್ರವಾರ) ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಇನ್ನೊಂದು ವಿಮಾನ ಸೇವೆ ಆರಂಭಿಸಲಿದೆ. ಮುಂಬಯಿ-ಮಂಗಳೂರು ಸೆಕ್ಟರ್ ನಲ್ಲಿಯೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಧ್ಯಾಹ್ನದ ಅನಂತರದ ವಿಮಾನವನ್ನು 4 ಗಂಟೆಗೆ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.