ಸವಾಲುಗಳನ್ನು ಮೆಟ್ಟಿನಿಂತ ದೀಪ್ತಿ; ವಿಶ್ವ ಅಥ್ಲೆಟಿಕ್​ ಚಾಂಪಿಯನ್ ಆದ ಯಶೋಗಾಥೆ



KANNADA ALERT DESK

ಬಡತನ ಮತ್ತು ಸಾಮಾಜಿಕ ಕಷ್ಟಗಳನ್ನು ದಾಟಿ ವಿಶ್ವ ಅಥ್ಲೆಟಿಕ್ಚಾಂಪಿಯನ್ಆಗಿ ದೀಪ್ತಿ ಹೊರ ಹೊಮ್ಮಿದ್ದು, ಅವರ ಪ್ರಯಾಣ ಅನೇಕರಿಗೆ ಸ್ಪೂರ್ತಿ ತಂದಿದೆ.

 

ವಾರಂಗಲ್ ಜಿಲ್ಲೆಯ ಕಲ್ಲೇಡಾ ಗ್ರಾಮದವರಾದ ದೀಪ್ತಿ, ಆರ್ಥಿಕ ಅಡೆತಡೆ ನಡುವೆ ಜಾತಿ ಎಂಬ ಸಾಮಾಜಿಕ ಕಳಂಕದ ನೆರಳಿನ ಅಡ್ಡಿ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು.  ಆದರೆ, ಆಕೆಯ ಸಾಧನೆಗೆ ಇವುಗಳು ಅಡ್ಡಿಯಾಗಲಿಲ್ಲ.

 

ವರಂಗಲ್ನಲ್ಲಿ ಶಾಲಾ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದ ದೀಪ್ತಿ ಸಾಮರ್ಥ್ಯವನ್ನು ಗುರುತಿಸಿದವರು ಭಾರತದ ಜೂನಿಯರ್ (JUNIOR) ಟೀಮ್ ಮುಖ್ಯ  ತರಭೇತುದಾರಆಗಿದ್ದ ನಾಗ್ಪುರಿ ರಮೇಶ್​. ಆಕೆಯ ಸಾಮರ್ಥ್ಯವನ್ನು  ಗುರುತಿಸಿದ ರಮೇಶ್​​  ಆಕೆಯನ್ನು ತರಬೇತಿಗೆ ಹೈದರಾಬಾದ್​​ಗೆ ಕಳುಹಿಸುವಂತೆ ಪೋಷಕರಿಗೆ ಒತ್ತಾಯಿಸಿದರು. ಒತ್ತಾಯಕ್ಕೆ ಅವರಿಗೆ ಆರ್ಥಿಕ ಪರಿಸ್ಥಿತಿ ಕೂಡ ಅಡ್ಡಿಯಾಗಿತ್ತು. ಆದರೆ, ರಮೇಶ್ಅವರ ಕೃಪಾಕಟಾಕ್ಷ ಮತ್ತು ಈನಾಡು ಸಿಎಸ್ಆರ್ ಕಾರ್ಯಕ್ರಮಲಕ್ಷ್ಯಮಾರ್ಗದರ್ಶಕ ಪುಲ್ಲೇಲ ಗೋಪಿಚಂದ್ ಅವರ ಮಧ್ಯಸ್ಥಿಕೆಯೇ ದೀಪ್ತಿ ಅವರ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯುವಂತೆ ಮಾಡಿದೆ.

 

ಆರಂಭಿಕ ಪ್ರಯಾಣದಿಂದ ಅಂತಾರಾಷ್ಟ್ರೀಯ ಮೆಚ್ಚುಗೆ ಗಳಿಸುವಲ್ಲಿ ದೀಪ್ತಿ ಸಾಧನೆಯ ಹಾದಿ ಯಾವುದಕ್ಕೇನೂ ಕಡಿಮೆಯಾಗಿರಲಿಲ್ಲ. ಆರ್ಥಿಕ ಬೆಂಬಲ ಮತ್ತು ಉನ್ನತ ದರ್ಜೆಯ ತರಬೇತಿಯೊಂದಿಗೆ, ಅವರು ಪ್ಯಾರಾ-ಅಥ್ಲೆಟಿಕ್ಸ್ ಉತ್ತುಂಗಕ್ಕೆ ಏರಿ, ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ದಾಖಲೆಗಳನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ.

 

2022ರಲ್ಲಿ ಮೊರೊಕ್ಕೊದಲ್ಲಿ ನಡೆದ ವರ್ಲ್ಡ್​​ ಪ್ಯಾರಾ ಗ್ರಾಂಡ್ಪ್ರಿಕ್ಸ್ನಲ್ಲಿನ ವಿಜಯ ಸೇರಿದಂತೆ ದೀಪ್ತಿ 400 ಈವೆಂಟ್ T20ಯಲ್ಲಿ ಮೊದಲ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್ ಪಡೆದರು. ಮೂಲಕ T20 ವರ್ಗದಲ್ಲಿ ಹೊಸ ದಾಖಲೆ ಕೂಡಾ ನಿರ್ಮಿಸಿದರು. ಬ್ರಿಸ್ಬೇನ್ನಲ್ಲಿ ನಡೆದ ವರ್ಟಸ್ ಏಷ್ಯನ್ ಗೇಮ್ಸ್ನಲ್ಲಿಯೂ ಅವರು 200 ಮೀಟರ್ಆಟದಲ್ಲಿ ಅದ್ಭುತ ಸಾಮರ್ಥ್ಯ ಪ್ರದರ್ಶನ ತೋರಿದರು. 200 ಮೀಟರ್ ಓಟವನ್ನು ಕೇವಲ 26.82 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಶಹಾಬ್ಬಾಸ್ಎನಿಸಿಕೊಂಡರು. 400 ಮೀಟರ್ಅನ್ನು ಕೇವಲ 57.58 ಸೆಕೆಂಡುಗಳಲ್ಲಿ ಓಡಿ ಎರಡು ಓಟದಲ್ಲಿ ಗೋಲ್ಡ್ ಮೆಡಲ್ ಗೆ ಕೊರಳೊಡ್ಡಿದರು.

 

ಶ್ಲಾಘನೆಗಳು ಮತ್ತು ಪ್ರಶಂಸೆಗಳ ನಡುವೆ, ದೀಪ್ತಿ ತನ್ನ ಯಶಸ್ಸಿಗೆ ತನ್ನ ಮಾರ್ಗದರ್ಶಕರಾದ ಗೋಪಿಚಂದ್ ಮತ್ತು ರಮೇಶ್ಮತ್ತು ಲಕ್ಷ್ಯದ ಬೆಂಬಲ ಕಾರಣವೆಂದು ಹೇಳುತ್ತಾರೆ. ಪ್ಯಾರಾಲಿಂಪಿಕ್ಸ್ನತ್ತ ಯಶಸ್ಸಿನ ದೃಷ್ಟಿ ನೆಟ್ಟಿರುವ ದೀಪ್ತಿಯ ಪ್ರಯಾಣದಲ್ಲಿ ಸ್ಥಿತಿಸ್ಥಾಪಕತ್ವ, ದೃಢತೆ ಮತ್ತು ಅಚಲ ಮನೋಭಾವ ಇರುವುದು ಅವರ ಎಲ್ಲ ಸಾಧನೆಗೆ ಸ್ಫೂರ್ತಿಯಾಗುತ್ತಿದೆ. ಅವರ ಪರಿಶ್ರಮ ಮತ್ತು ಉತ್ಸಾಹದಿಂದ ಗೆಲುವಿಗೆ ಯಾವುದೇ ಮಿತಿ ಇಲ್ಲ ಎಂದು ಸಾಬೀತಾಗಿದೆ.

 

ದೀಪ್ತಿಯ ಸಾಧನೆಯ ಖುಷಿಯಲ್ಲಿ ಕುಟುಂಬ ಮುಳುಗಿದೆ. ಆಕೆಯ ಕಥೆ ಅನೇಕರಿಗೆ ಸ್ಪೂರ್ತಿಯಾಗಿದೆ. ಸಾವಲುಗಳನ್ನು ಮೆಟ್ಟಿ ನಿಲ್ಲುವ, ಕನಸನ್ನು ನನಸಾಗಿಸಲು ಬೆನ್ನಟ್ಟುವವರಿಗೆ ಪ್ರೇರಣೆಯಾಗಿದೆ.