KANNADA ALERT DESK
ಅನಾರೋಗ್ಯಯುತ
ಜೀವನಶೈಲಿಯಿಂದ ಪಾರ್ಶ್ವವಾಯು
ಅಪಾಯವನ್ನು ಹೆಚ್ಚು ಸಂಭವಿಸುತ್ತದೆ. ಈ
ಹಿನ್ನೆಲೆಯಲ್ಲಿ ಈ ಕೆಳಗಿನ ಕ್ರಮಗಳನ್ನು
ಅನುಸರಿಸುವುದು ಅವಶ್ಯ.
ಪಾರ್ಶ್ವವಾಯು
ಎಂಬುದು ದೊಡ್ಡ ಸಮಸ್ಯೆಯಾಗಿದೆ. ಒಂದು
ಅಂಗ ಸತ್ತರೆ, ಅದು ಸಂಪೂರ್ಣವಾಗಿ ಚೇತರಿಕೆಯಾಗುವುದು
ಕಷ್ಟಸಾಧ್ಯ. ಈ ವೇಳೆ ಸಂಪೂರ್ಣ
ಜೀವನ ಆ ವ್ಯಕ್ತಿ ಅಂಗವಿಕಲತೆಯಿಂದ
ಬಳಲುವಂತೆ ಆಗುತ್ತದೆ.
ಈ ಹಿನ್ನೆಲೆಯಲ್ಲಿ ಇಂತಹ ಪರಿಸ್ಥಿತಿಗಳನ್ನು ತಡೆಗಟ್ಟುವುದು ಅಗತ್ಯವಾಗಿದೆ. ಪಾರ್ಶ್ವವಾಯುವಿನ
ಜೊತೆಗೆ ವಯಸ್ಸು, ಲಿಂಗ ಮತ್ತು ಕುಟುಂಬದ ಹತ್ತಿರದ ಸಂಬಂಧಿಗಳು ವಿಚಾರದಲ್ಲಿ ಸಾಕಷ್ಟು ಅಪಾಯದ ವಿಷಯಗಳನ್ನು ಮಾರ್ಪಡು ಮಾಡಲು ಸಾಧ್ಯವಿಲ್ಲ. ಆದರೆ ಈ ಕೆಲವು ಅಂಶಗಳನ್ನು
ನಾವು ಮಾರ್ಪಡಿಸಬಹುದು.
ಅಧಿಕ
ರಕ್ತದೊತ್ತಡ: ಪಾರ್ಶ್ವವಾಯುವಿನ ಅತಿ ದೊಡ್ಡ ಅಪಾಯಕಾರಿ ಅಂಶ ಎಂದರೆ ಅದು ಅಧಿಕ ರಕ್ತದೊತ್ತಡ (HIGH
BP). ಅಧಿಕ ರಕ್ತದೊತ್ತಡ ಹೊಂದಿರುವ ಜನರು ತಮ್ಮ 80ನೆ ವರ್ಷಕ್ಕೆ ಮುನ್ನ
ಪಾರ್ಶ್ವವಾಯುಗೆ ತುತ್ತಾಗುವ ಅಪಾಯ 2 ರಿಂದ 4 ರಷ್ಟು ಇರುತ್ತದೆ. ಈ ಹಿನ್ನೆಲೆಯಲ್ಲಿ ಔಷಧ
ತೆಗೆದುಕೊಳ್ಳುವುದು, ಆಹಾರ ಅಭ್ಯಾಸ ಬದಲಾವಣೆ, ವ್ಯಾಯಾಮಗಳನ್ನು ರೂಢಿಸಿಕೊಳ್ಳುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದಾಗಿದೆ.
ಕೊಲೆಸ್ಟ್ರಾಲ್:
ಮಿತಿಗಿಂತ ಮೀರಿದ ಕೊಲೆಸ್ಟ್ರಾಲ್ ದೇಹಕ್ಕೆ ಹೆಚ್ಚಾಗಬಾರದು. ಅಧಿಕ ಕೊಲೆಸ್ಟ್ರಾಲ್ ರಕ್ತ ನಾಳದಲ್ಲಿ ಶೇಖರವಾಗುತ್ತದೆ. ಇದು ರಕ್ತ ನಾಳವನ್ನು ಸಂಕುಚಿತಗೊಳಿಸಿ, ಹೆಪ್ಪುಗಟ್ಟಲು ಕಾರಣವಾಗುತ್ತದೆ. ಈ ರೀತಿ ಹೆಚ್ಚಾದರೆ
ಅದು ರಕ್ತನಾಳವನ್ನು ತಡೆ ಹಿಡಿಯುತ್ತದೆ. ಈ ಭಾಗವು ಛಿದ್ರವಾಗಬಹುದು.
ಹಾಗೇ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಿಸಬಹುದು. ಮೆದುಳಿನ ರಕ್ತನಾಳಗಳಲ್ಲಿ ಅವು ರೂಪುಗೊಂಡರೆ, ಅದು ಪಾರ್ಶ್ವವಾಯುವಿಗೆ ಕಾರಣವಾಗಲಿದೆ.
ಮಧುಮೇಹ
ನಿಯಂತ್ರಣ: ಮಧುಮೇಹವೂ ನಿಯಂತ್ರಣ ಮಾಡದಿದ್ದಲ್ಲಿ ಇದು ಮಿದುಳಿನ ರಕ್ತನಾಳವನ್ನು ಹಾನಿ ಮಾಡುತ್ತದೆ. ಇದು ಕೂಡ ಪಾರ್ಶ್ವವಾಯುವಿನ ಅಪಾಯ ಹೆಚ್ಚಿಸುತ್ತದೆ. ಮಧುಮೇಹಿಗಳಲ್ಲಿ ಅಧಿಕ ರಕ್ತದೊತ್ತಡ ಜನರನ್ನು ಕಾಣಬಹುದು. ಈ ಎರಡೂ ಅಪಾಯವನ್ನು
ಹೆಚ್ಚಿಸುವ ಅಂಶವಾಗಿದೆ
ಧೂಮಪಾನ
: ಧೂಮಪಾನ ಒಂದೇ ಅಂಶ ಕೂಡ ಪಾರ್ಶ್ವಾವಾಯುವಿನ ಅಪಾಯ ಹೆಚ್ಚಿಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಧೂಮಪಾನ
ಚಟದಿಂದ ದೂರಾಗುವುದು ಒಳ್ಳೆಯದು. ಧೂಮಪಾನ ತೊರೆದು 2 ವರ್ಷದ ಬಳಿಕ
ಪಾರ್ಶ್ವವಾಯುನ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ. 5 ವರ್ಷದ ಬಳಿಕ
ಇದರ ಅಪಾಯ ಧೂಮಪಾನೇತರ ಮಟ್ಟದಲ್ಲಿರುತ್ತದೆ.
ಮಾದಕ
ದ್ರವ್ಯಗಳಿಂದ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚು. ಪ್ರತಿ ಬಾರಿ ಇದರ ಸೇವನೆಯಿಂದ ಬೆದರಿಕೆ ಹೆಚ್ಚಾಗುತ್ತದೆ. ಇತರ ಅಪಾಯಕಾರಿ ಅಂಶಗಳ ಕೂಡ ಇದರ ಅಪಾಯವನ್ನು ಹೆಚ್ಚಿಸುತ್ತದೆ.
ಕೆಲವು
ದುರ್ಬಲಗೊಂಡ ರಕ್ತನಾಳದ ಗೋಡೆಯನ್ನು ಹೊಂದಿದ್ದು, ಅದು ಬಲೂನ್ (ಅನ್ಯೂರಿಸ್ಮ್) ನಂತೆ ಉಬ್ಬಲಿದೆ. ಅವು ಛಿದ್ರವಾಗಬಹುದು ಮತ್ತು ರಕ್ತಸ್ರಾವವಾಗಬಹುದು. ಇದು ಮೆದುಳಿನ ಸುತ್ತ ತಲುಪಿ, ಒಳಗೆ ಒತ್ತಡವನ್ನು ಹೆಚ್ಚಿಸಬಹುದು. ಪರಿಣಾಮ ಊತ ಮತ್ತು ಕೆಲವು
ವೇಳೆ ಪಾರ್ಶ್ವವಾಯುಗೆ ಕಾರಣವಾಗುತ್ತದೆ. 3 ಎಂಎಂ ಸಣ್ಣ ವ್ಯಾಸದ ರಕ್ತನಾಳಗಳು ಹೆಚ್ಚಿನ ಸಮಸ್ಯೆಗೆ ಕಾರಣವಾಗುವುದಿಲ್ಲ. ಆದರೆ ಏಳು ಮಿ.ಮೀ ದೊಡ್ಡ
ವ್ಯಾಸದ ರಕ್ತನಾಳದಿಂದ ರಕ್ತಸ್ರಾವದ ಸಾಧ್ಯತೆ ಹೆಚ್ಚು. ಈ ರೀತಿ ಸಮಸ್ಯೆ
ಹೊಂದಿರುವವರು ಸರ್ಜರಿ ಅಥವಾ ಇತರ ಚಿಕಿತ್ಸಕ ಕ್ರಮಕ್ಕೆ ಒಳಗಾಗುವುದು ಉತ್ತಮ.

Social Icons