KANNADA
ALERT DESK
ಕಳೆದ
ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಛಾಪು ಮೂಡಿಸಿರುವ ವೀರಮದಕರಿ ಸುಂದರಿ ರಾಗಿಣಿ ದ್ವಿವೇದಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ
ಬೆಂಗಳೂರು:ಬೋಲ್ಡ್
ನಟನೆ ಜೊತೆಗೆ ಗ್ಲ್ಯಾಮರ್ನಿಂದ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ
ನಟಿ ರಾಗಿಣಿ ದ್ವಿವೇದಿ 34ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ಈ ಬೆಡಗಿಗೆ
ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಬರ್ತ್ ಡೇ ಶುಭ ಕೋರುತ್ತಿದ್ದಾರೆ. ಸ್ಯಾಂಡಲ್ವುಡ್ ಸುಂದರಿ ಈ
ಬಾರಿ ಈ ವರ್ಷದ ಹುಟ್ಟುಹಬ್ಬವನ್ನು ಕೊಂಚ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.
ಕಳೆದ
ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಛಾಪು ಮೂಡಿಸಿರುವ ವೀರಮದಕರಿ ಸುಂದರಿ ರಾಗಿಣಿ ದ್ವಿವೇದಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ತಮ್ಮ
ದಶಕದ ಸಿನಿ ಜರ್ನಿಯಲ್ಲಿ ಏಳು ಬೀಳುಗಳನ್ನು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇಂದು ಕೆಲ ಸಾಮಾಜಿಕ ಕೆಲಸಗಳ ಮೂಲಕ ಬರ್ತ ಡೇ ಆಚರಿಸಿಕೊಂಡರು. ಸ್ಮಶಾನದಲ್ಲಿ ಕೆಲಸ ಮಾಡುವ ಬಡವರಿಗೆ ಹಾಗೂ ಮಂಗಳಮುಖಿಯರಿಗೆ ಬಟ್ಟೆ, ದಿನಸಿ ಸಾಮಗ್ರಿಗಳನ್ನು ಕೊಡುವ ಮೂಲಕ ರಾಗಿಣಿ ಅರ್ಥಪೂರ್ಣವಾಗಿ ಬರ್ತ್ ಡೇ ಆಚರಿಸಿಕೊಂಡರು.
ಶ್ರೀನಗರ
ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಸ್ಪೆಷಲ್ ಸಾಂಗ್ಗೆ ಸಖತ್ ಡ್ಯಾನ್ಸ್
ಮಾಡುವ ಮೂಲಕ ಚಿತ್ರದ ಭಾಗವಾಗಿದ್ದಾರೆ. ಹೀಗಾಗಿ ನಿರ್ದೇಶಕ ನಾಗಶೇಖರ್ ರಾಗಿಣಿ ಬರ್ತ್ ಡೇಗೆ ಹಾಡಿನ ಮೇಕಿಂಗ್ ವಿಡಿಯೋ ರಿವೀಲ್ ಮಾಡುವ ಮೂಲಕ ಬರ್ತ್ ಡೇ ಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಕೋವಿಡ್
ಸಂದರ್ಭ ರಾಗಿಣಿ ತಮ್ಮ ಜೆನ್ ನೆಕ್ಸ್ಟ್ ಚಾರಿಟೇಬಲ್ ವತಿಯಿಂದ ಮಂಗಳಮುಖಿಯರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ.
Social Icons