ಕನ್ನಡದ ನಿರ್ದೇಶಕನ ಜೊತೆ ಅಜಯ್ ದೇವಗನ್ ಸಿನಿಮಾ? ಸೃಷ್ಟಿಸಿದೆ ಕುತೂಹಲ- Ajay Devgan




KANNADA ALERT DESK

ಬಾಲಿವುಡ್ನ ಸ್ಟಾರ್ ನಟ ಅಜಯ್ ದೇವಗನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ, ಈಗ ಅವರು ಕನ್ನಡದ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಮುಂದಿನ ಸಿನಿಮಾ  ಸಲುವಾಗಿ ಈ ಚರ್ಚೆ ನಡೆದಿದೆ. ಕನ್ನಡದ ನಿರ್ದೇಶಕ ಹೇಳಿದ ಕಥೆ ಕೂಡ ಅಜಯ್ ದೇವಗನ್ ಅವರಿಗೆ ಇಷ್ಟ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಅವರಿಂದ ಒಪ್ಪಿಗೆ ಸಿಗಲಿದೆ. 


ಆ ಕನ್ನಡದ ನಿರ್ದೇಶಕ ಜಗನ್ ಶಕ್ತಿ! . ಜಗನ್ ಶಕ್ತಿ ಮತ್ತು ಅಜಯ್ ದೇವಗನ್ ಅವರು ಹೊಸ ಸಿನಿಮಾ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಜಗನ್ ಶಕ್ತಿ ಅವರು ಅಪ್ಪಟ ಕನ್ನಡದ ಪ್ರತಿಭೆಯಾಗಿದ್ದಾರೆ. ಬೆಂಗಳೂರಿನಲ್ಲಿ ಬೆಳೆದ ಅವರು ತುಂಬ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಆದರೆ ಅವರು ವೃತ್ತಿಜೀವನ ಆರಂಭಿಸಿದ್ದು ಬಾಲಿವುಡ್ನಲ್ಲಿ. ನಿರ್ದೇಶಕ ಆರ್. ಬಾಲ್ಕಿ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಜಗನ್ ಶಕ್ತಿ ಅವರಿಗೆ ಇದೆ. ಬಳಿಕ ಅವರು ‘ಮಿಷನ್ ಮಂಗಲ್’ ಸಿನಿಮಾಗೆ ನಿರ್ದೇಶನ ಮಾಡಿ ದೊಡ್ಡ ಗೆಲುವು ಕಂಡರು.


2019ರಲ್ಲಿ  ಜಗನ್ ಶಕ್ತಿ‘ಮಿಷನ್ ಮಂಗಲ್’ ಸಿನಿಮಾ ತೆರೆಕಂಡಿತ್ತು. ಈಗ ಅವರು ಅಜಯ್ ದೇವಗನ್ ಜೊತೆ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಕಥೆ, ಪಾತ್ರ ಎಲ್ಲವೂ ಒಪ್ಪಿಗೆಯಾದರೆ ಅಜಯ್ ದೇವಗನ್ ಅವರು ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣವನ್ನು ಕೂಡ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ‘ಮಿಷನ್ ಮಂಗಲ್’ನಲ್ಲಿ ಕನ್ನಡಿಗ ಜಗನ್ ಶಕ್ತಿ ಅವರು ಮಂಗಳಯಾನದ ಕಥೆಯನ್ನು ಸಿನಿಮಾ ಮಾಡಿದ್ದರು. ಈಗ ಅವರು ಅಜಯ್ ದೇವಗನ್ ಜೊತೆ ಮಾಡುವ ಸಿನಿಮಾ ಯಾವ ಶೈಲಿಯಲ್ಲಿ ಇರಲಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ‘ಮಿಷನ್ ಮಂಗಲ್’ ಸಿನಿಮಾ ಆಗ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿಇದು  200 ಕೋಟಿ ರೂಪಾಯಿ ಗಳಿಸಿತ್ತು.